

ಬೆಂಗಳೂರು: ಸ್ಯಾಂಡಲ್ವುಡ್ ನಟ, ಕಿರುತೆರೆ ನಟ ಚಂದನ್ ಮೇಲೆ ಶೂಟಿಂಗ್ ಸ್ಥಳದಲ್ಲೇ ಹಲ್ಲೆ ನಡೆದಿದೆ.
ಕನ್ನಡದ 'ರಾಧಾ ಕಲ್ಯಾಣ', 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಖ್ಯಾತಿಯ ಚಂದನ್ ಕುಮಾರ್, ಸಿನಿಮಾ, ರಿಯಾಲಿಟಿ ಶೋಗಳಲ್ಲೂ ಫೇಮಸ್ ಆಗಿದ್ದಾರೆ. 'ಶ್ರೀಮತಿ ಶ್ರೀನಿವಾಸ್' ಧಾರಾವಾಹಿಯಲ್ಲಿ ನಟಿಸುತ್ತಿರುವ ಚಂದನ್, ಹೈದರಾಬಾದ್ನಲ್ಲಿ ಚಿತ್ರೀಕರಣಕ್ಕೆ ತೆರಳಿದ್ದರು. ಈ ವೇಳೆ ತೆಲುಗು ಸೀರಿಯಲ್ ತಂತ್ರಜ್ಙರ ಜತೆ ಕಿರಿಕ್ ಆಗಿದ್ದು, ಚಂದನ್ಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಯಾವ ಕಾರಣಕ್ಕೆ ಚಂದನ್ ಮೇಲೆ ಹಲ್ಲೆ ಆಗಿದೆ ಎಂಬುದು ಇನ್ನೂ ಸರಿಯಾಗಿ ಗೊತ್ತಾಗಿಲ್ಲ. ಆದರೆ, ಗಲಾಟೆ ಆಗುತ್ತಿರುವ, ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕ್ಯಾಮರಮನ್ ಮೇಲೆ ಚಂದನ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ವಿಚಾರಕ್ಕೆ ಗಲಾಟೆ ನಡೆದಿದ್ದು, ಚಂದನ್ ಕ್ಷಮೆ ಕೇಳಿದರೂ ಪರಿಸ್ಥಿತಿ ತಣ್ಣಗಾಗಿಲ್ಲ. ಕೈ ಮಿಲಾಯಿಸಿದ್ದಾರೆ.
ಕಿರುತೆರೆಗಳಲ್ಲಿ ಮಾತ್ರವಲ್ಲ ಹಿರಿತೆರೆಯಲ್ಲೂ ಚಂದನ್ ಬಣ್ಣ ಹಚ್ಚಿದ್ದಾರೆ. ಪ್ರೇಮ ಬರಹ, ಲವ್ ಯೂ ಆಲಿಯಾ ಸಿನಿಮಾದಲ್ಲೂ ಚಂದನ್ ನಟಿಸಿದ್ದಾರೆ. ಬಿಗ್ಬಾಸ್ ಸೀಸನ್-3ರಲ್ಲೂ ಚಂದನ್ ಸ್ಪರ್ಧಿಸಿದ್ದರು.
ತೆಲುಗು ಧಾರಾವಾಹಿ ಸೆಟ್ನಲ್ಲಿ ಚಂದನ್ ಮೇಲೆ ಜು.31ರಂದು ಹಲ್ಲೆ ನಡೆದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.