'ದಳಪತಿ 68' ಬಗ್ಗೆ ಇಲ್ಲಿದೆ ಹೊಸ ಅಪ್ಡೇಟ್!​

Untitled design - 2023-09-26T195306.720
Published on

ತಮಿಳುನಾಡು: ಕಾಲಿವುಡ್​ನ ಸ್ಟಾರ್​ ನಟ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಮುಂದಿನ ಚಿತ್ರ 'ಲಿಯೋ' ಇದೇ ಅಕ್ಟೋಬರ್​ 19 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ಈ ಪ್ಯಾನ್​ ಇಂಡಿಯಾ ಸಿನಿಮಾವನ್ನು ಕಣ್ತುಂಬಿಕೊಳ್ಳಲು ವಿಜಯ್​ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಈ ಮಧ್ಯೆ ವಿಜಯ್​ ನಟಿಸಲಿರುವ ಮತ್ತೊಂದು ಚಿತ್ರಕ್ಕೆ 'ದಳಪತಿ 68' ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದ್ದು, ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ವೆಂಕಟ್ ಪ್ರಭು ನಿರ್ವಹಿಸಲಿದ್ದಾರೆ. ಸದ್ಯ ಇತ್ತೀಚಿನ ವರದಿ ಪ್ರಕಾರ, ಚಿತ್ರದ ಚಿತ್ರೀಕರಣ ಇದೇ ಅಕ್ಟೋಬರ್​ 02, ಗಾಂಧಿ ಜಯಂತಿ ದಿನದಂದು ಪ್ರಾರಂಭವಾಗಲಿದೆ.

ಚಿತ್ರದಲ್ಲಿ ಎಸ್‌.ಜೆ. ಸೂರ್ಯ, ಪ್ರಭುದೇವ, ಸ್ನೇಹಾ, ಪ್ರಶಾಂತ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂದು ವರದಿ ತಿಳಿಸಿದೆ. ಈ ಕುರಿತು ಸದ್ಯ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಇನ್ನೂ ಪ್ರಕಟಗೊಂಡಿಲ್ಲ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net