

ಕಲಬುರಗಿ: ಜನ್ಮದಿನದ ಪಾರ್ಟಿ ಮುಗಿಸಿ ವಾಪಾಸ್ ಬರುವ ವೇಳೆ ಬೈಕ್ ಅಪಘಾತಕ್ಕೆ ತುತ್ತಾದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ರಿಂಗ್ ರಸ್ತೆಯ ನಾಗನಹಳ್ಳಿಯಲ್ಲಿ ವರದಿಯಾಗಿದೆ.
ಹುಟ್ಟುಹಬ್ಬದ ಸಂಭ್ರಮವನ್ನು ಮುಗಿಸಿ ಮನೆಗೆ ಹಿಂದಿರುಗವಾಗ ವೇಗವಾಗಿ ಬರುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ಎದುರಿಗಿದ್ದ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ದುರ್ದೈವಿಗಳನ್ನು ಅಲಿ ಅಬ್ಬಾಸ್ ಹಾಗೂ ಇರ್ಫಾನ್ ಎಂದು ಗುರುತಿಸಲಾಗಿದೆ.
ಮೃತ ವಿದ್ಯಾರ್ಥಿಗಳು ಅಂಬಿಕಾ ನಗರ ಹಾಗೂ ರೆಹಮತ್ ನಗರದ ನಿವಾಸಿಗಳು ಎಂದು ವರದಿ ತಿಳಿಸಿದ್ದು, ಅಬ್ಬಾಸ್ ಅಲಿ ಜನ್ಮದಿನದ ಹಿನ್ನಲೆ ಪಾರ್ಟಿಗೆ ತೆರಳಿದ್ದರು. ಈ ವೇಳೆ ಪಾರ್ಟಿ ಮುಗಿಸಿ ವೇಗವಾಗಿ ಬೈಕ್ನ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಸದ್ಯ ಈ ಅಪಘಾತದ ಪ್ರಕರಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.