More

    ಬೆಂಗಳೂರು ಬಂದ್; ಒಂದು ಸಾವಿರಕ್ಕೂ ಅಧಿಕ ಜನರ ಬಂಧನ, ಬಿಡುಗಡೆ: ಪೊಲೀಸ್ ಕಮಿಷನರ್

    ಬೆಂಗಳೂರು: ಕಾವೇರಿ ನದಿ ನೀರು ವಿವಾದ ವಿಚಾರವಾಗಿ ಇಂದು ನಡೆದ ಬೆಂಗಳೂರು ಬಂದ್ ವೇಳೆ ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಬಂಧಿಸಿ ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.

    ಬಂದ್ ಕುರಿತಂತೆ ಅಪ್​ಡೇಟ್ಸ್​ ನೀಡಿದ ಅವರು, ಇವತ್ತು ಕೆಲವು ಸಂಘಟನೆಗಳು ಬಂದ್ ಮಾಡಿದ್ದು, ಬೆಳಗ್ಗೆಯಿಂದ ಶಾಂತಿಯುತವಾಗಿ ಬಂದ್ ನಡೆದಿದೆ. ಯಾವುದೇ ಅಹಿತಕರ ಘಟನೆಗಳು ನಗರದಲ್ಲಿ ನಡೆದಿಲ್ಲ. ನಗರದಾದ್ಯಂತ ವ್ಯಾಪಕವಾದ ಬಂದೋಬಸ್ತ್ ಮಾಡಲಾಗಿತ್ತು ಎಂದು ಹೇಳಿದರು.

    ಕೆಲವು ಕಡೆಗಳಲ್ಲಿ ಅಂಗಡಿ ಮುಂಗಟ್ಟು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದರು. ಯಾವುದೇ ಬಸ್​ಗಳಿಗೆ ಕಲ್ಲು ತೂರಾಟ ಆಗಿಲ್ಲ, ಜಯನಗರದಲ್ಲಿ ಕೆಲವು ಘಟನೆಗಳು ಆಗಿವೆ, ಪೊಲೀಸರು ಅದರ ಬಗ್ಗೆ ತನಿಖೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

    ಜಯನಗರ ಶಾಸಕರನ್ನು ವಶಕ್ಕೆ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೈಕ್ ರ್ಯಾಲಿ ಮಾಡಲು ಸಜ್ಜಾಗಿದ್ದರು, ಇದಕ್ಕೆ ಮೊದಲೇ ಅವರನ್ನು ವಶಕ್ಕೆ ಪಡೆಯಲಾಗಿತ್ತು ಎಂದರು. ತಮಿಳುನಾಡು ಬಸ್​ಗಳ ಸಂಚಾರ ಅವರೇ ಸಂಚಾರ ನಿಲ್ಲಿಸಿದ್ದರು. ಈಗ ಎಲ್ಲಾ ಬಸ್​ಗಳ ಸಂಚಾರ ಆಗುತ್ತಿದೆ. ಏರ್​​ಪೋರ್ಟ್​​ಗೂ ಬಸ್​ಗಳು ಸಂಚರಿಸುತ್ತಿವೆ ಎಂದು ಹೇಳಿದರು.

    ಮುನ್ನೆಚ್ಚರಿಕೆ ಕ್ರಮವಾಗಿ ಬಂದ್​ಗೂ ಮೊದಲೇ ಕೆಲವರನ್ನು ವಶಕ್ಕೆ ಪಡೆದಿದ್ದೆವು. ನಂತರ ಬಂದ್​ಗೆ ಬಂದಿದ್ದ ಕೆಲವರನ್ನು ವಶಕ್ಕೆ ಪಡೆದೆವು. ಹೀಗೆ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದ್ದು, ಬಳಿಕ ಅವೆಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.

    ಕಾವೇರಿ ನದಿ ನೀರು ವಿವಾದ: ಪ್ರಧಾನಿ ಮಧ್ಯಸ್ಥಿಕೆ ವಹಿಸಲಿ ಎಂದ ಸಿಎಂ ಸಿದ್ದರಾಮಯ್ಯ

    ಬೆಂಗಳೂರು-ಮೈಸೂರು ದಶಪಥದಲ್ಲಿ ಆರು ಕಾರುಗಳು ಮಧ್ಯೆ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts