

ತಮಿಳುನಾಡು: ರಾಷ್ಟ್ರಪ್ರಶಸ್ತಿ ವಿಜೇತ, ನಿರ್ಮಾಪಕ, ತಮಿಳು ನಟ ಧನುಷ್ ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್-ಡ್ರಾಮಾ 'ಕ್ಯಾಪ್ಟನ್ ಮಿಲ್ಲರ್' ಚಿತ್ರವು ಇದೇ ಡಿ. 15 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಬೇಕಿತ್ತು. ಆದ್ರೆ, ಚಿತ್ರತಂಡ ಇದೀಗ ರಿಲೀಸ್ ದಿನಾಂಕದಲ್ಲಿ ಬದಲಾವಣೆ ತಂದಿದ್ದು, 2024ರ ಸಂಕ್ರಾಂತಿ ಹಬ್ಬಕ್ಕೆ ಮುಂದೂಡಿದೆ.
ಈ ಮಧ್ಯೆ ಧನುಷ್ ಅಭಿಮಾನಿಗಳ ಚಿತ್ತ ಅವರ ಎರಡನೇ ನಿರ್ದೇಶನದ ಸಿನಿಮಾ ತಾತ್ಕಾಲಿಕವಾಗಿ 'D50' ಎಂದು ಕರೆಯಲ್ಪಟ್ಟ ಚಿತ್ರದ ಮೇಲೆ ಮೂಡಿದೆ. ಈ ಚಿತ್ರವು ಧನುಷ್ ಅವರ 50ನೇ ಯೋಜನೆ ಎಂಬುದು ಗಮನಾರ್ಹ. ಬಹುದಿನಗಳಿಂದ ಪ್ರತ್ಯೇಕವಾಗಿ ಡಿ50 ಚಿತ್ರದ ಬಗ್ಗೆ ಹೊಸ ಮಾಹಿತಿ ಹಂಚಿಕೊಳ್ಳಿ ಎಂದು ಕೇಳುತ್ತಿದ್ದ ಫ್ಯಾನ್ಸ್ಗೆ ಇದೀಗ ಧನುಷ್ ತಡರಾತ್ರಿ ಹೊಸ ಅಪ್ಡೇಟ್ ಕೊಟ್ಟಿದ್ದಾರೆ.
“ಡಿ50 ಚಿತ್ರದ ಚಿತ್ರೀಕರಣ ಮುಗಿದಿದೆ. ಇಡೀ ಸಿಬ್ಬಂದಿ ಮತ್ತು ಪಾತ್ರವರ್ಗಕ್ಕೆ ನನ್ನ ಪ್ರಾಮಾಣಿಕ ಧನ್ಯವಾದಗಳು. ನನ್ನ ಕನಸಿಗೆ ಬೆಂಬಲಿಸಿದ್ದಕ್ಕಾಗಿ ಕಲಾನಿತಿ ಮಾರನ್ ಸರ್ ಮತ್ತು ಸನ್ ಪಿಕ್ಚರ್ಸ್ ಅವರಿಗೆ ತುಂಬ ಧನ್ಯವಾದಗಳು" ಎಂದು ಧನುಷ್ ಟ್ವೀಟ್ ಮಾಡಿ, ತಿಳಿಸಿದ್ದಾರೆ. ಈ ಮೂಲಕ ಚಿತ್ರವು ಶೀಘ್ರವೇ ನಿಮ್ಮ ಮುಂದೆ ಹಾಜರಾಗಲಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಎಲ್ಲೆಡೆ ಅರೆಭಾಷೆ ದಿನಾಚರಣೆ ಜರುಗಲಿ: ಕಾಳನ ರವಿ
'ಡಿ50' ಚಿತ್ರದಲ್ಲಿ ಧನುಷ್, ವಿಷ್ಣು ವಿಶಾಲ್, ದುಶಾರ ವಿಜಯನ್, ಕಾಳಿದಾಸ್ ಜಯರಾಮನ್, ಸಂದೀಪ್ ಕಿಶನ್, ಸೆಲ್ವರಾಘವನ್, ಎಸ್.ಜೆ. ಸೂರ್ಯ ಮುಂತಾದವರ ತಾರಾಗಣವಿದೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).