BBKS10: ಹಸಿವಿನಿಂದ ಕಂಗೆಟ್ಟ ಸದಸ್ಯರಿಗೆ ಸಿಕ್ತು ವಿಶೇಷ ವ್ಯಕ್ತಿಯ ಕೈಅಡುಗೆ!

ವಿಜಯವಾಣಿ (59)
Published on

ಬೆಂಗಳೂರು: ಮುದ್ದೆಯೂಟದ ಬಳಿಕ ಬಿಗ್‌ಬಾಸ್ ಮನೆಯ ಗ್ಯಾಸ್ ಕನೆಕ್ಷನ್ ಕಟ್ಟಾಗಿತ್ತು. ಇದರಿಂದ ಇಡೀ ಮನೆಯ ಸದಸ್ಯರೆಲ್ಲ ಕಂಗಾಲಾಗಿದ್ದರು. ಇದಕ್ಕೆ ರಾತ್ರಿ ಹಸಿದುಕೊಂಡೇ ಇಡೀ ದಿನ ಕಳೆಯಬೇಕಾಗುತ್ತದೆ ಎಂಬ ಬೇಸರ ತೀವ್ರವಾಗಿ ಮೂಡಿತ್ತು. ಆದರೆ ಹಸಿವಿಂದ ಕೂತ ಮನೆಯ ಸದಸ್ಯರಿಗೆ ಎಂದೆಂದೂ ಮರೆಯಲಾಗದಂತಹ ಸಖತ್ ಸ್ಪೆಷಲ್ ಸರ್ಪೈಸ್​ವೊಂದು ಸಿಕ್ಕಿದ್ದು, ಅದನ್ನು ಕೊಟ್ಟಿರುವುದು ಒಬ್ಬ ವಿಶೇಷ ವ್ಯಕ್ತಿ ಎಂಬುದು ಅಷ್ಟೇ ಸ್ಪೆಷಲ್ ಆಗಿದೆ.

ಹಸಿದವರಿಗೆ ಊಟ ಸಿಕ್ಕರೆ ಅದಕ್ಕಿಂತ ಹೆಚ್ಚಿನ ಖುಷಿ ಬೇರೆ ಇದೆಯೇ? ಆ ಖುಷಿಯಂತೂ ಈಗ ಬಿಗ್‌ಬಾಸ್ ಸದಸ್ಯರಿಗೆ ಸಿಕ್ಕಿದೆ. ಕೇವಲ ಸ್ಪೆಷಲ್‌ ಸರ್ಪ್ರೈಸ್​​ ಅಷ್ಟೇ ಅಲ್ಲ. ಅದಕ್ಕಿಂತ ಹೆಚ್ಚಿನದು. ಊಟ ಎಷ್ಟು ಮುಖ್ಯವೋ ಎಷ್ಟೋ ಸಲ ಅಡುಗೆ ಮಾಡಿದ ಕೈಗಳೂ ಅಷ್ಟೇ ಮುಖ್ಯವಾಗುತ್ತದೆ? ಯಾಕೆಂದರೆ ಅಡುಗೆ ಮಾಡುವವರ ಅಕ್ಕರೆ, ಪ್ರೀತಿ ಅವರ ವ್ಯಕ್ತಿತ್ವವೂ ಅಡುಗೆಯಲ್ಲಿ ಸೇರಿರುತ್ತದೆ. ಹಾಗಾದರೆ ಯಾರು ಅಡುಗೆ ಮಾಡಿದ್ದು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಆ ವಿಶೇಷ ವ್ಯಕ್ತಿ ಬೇರೆ ಯಾರು ಅಲ್ಲ, ನಟ ಕಿಚ್ಚ ಸುದೀಪ್‌ ಅವರು. ಹೌದು, ಮನೆಯ ಸದಸ್ಯರಿಗೆಲ್ಲ ತಮ್ಮ ಕೈಯಾರೆ ರೆಡಿ ಮಾಡಿದ ಅಡುಗೆಯನ್ನು ಸುದೀಪ್ ಪ್ರೀತಿಯಿಂದ ಕಳುಹಿಸಿದ್ದಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಊಟದ ಜತೆಗೆ ಒಂದೊಂದು ಪತ್ರವನ್ನೂ ಸಹ ಬರೆದು ಕಳಿಸಿದ್ದಾರೆ. ಆ ಪತ್ರದಲ್ಲಿ ಆಯಾ ಸ್ಪರ್ಧಿಗಳಿಗೆ ಅತ್ಯಮೂಲ್ಯವಾದ ಸಲಹೆಗಳಿವೆ.

ಕಿಚ್ಚನ ಕಿವಿಮಾತಿನೊಟ್ಟಿಗೆ ಬಂದ ಅಡುಗೆಯನ್ನು ನೋಡಿ ಮನೆಯ ಮಂದಿಯೆಲ್ಲ ಅಕ್ಷರಶಃ ಕುಣಿದಾಡಿದ್ದಾರೆ. ಒಬ್ಬೊಬ್ಬರೂ ಕ್ಯಾಮೆರಾ ಎದುರಿಗೆ ಬಂದು ಧನ್ಯವಾದ ತಿಳಿಸಿದ್ದಾರೆ. ಇದೊಂದು ಮರೆಯಲಾಗದ ಕೊಡುಗೆ ಎಂದು ಎಲ್ಲ ಸ್ಪರ್ಧಿಗಳಿಗೂ ಅನಿಸಿದೆ. ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net