ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಪುನೀತ್​ ಫೋಟೋ​! ಭಾವುಕರಾದ ಅಭಿಮಾನಿಗಳು

New Project (1)
Published on

ಬೆಂಗಳೂರು: ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ನಟ ಪುನೀತ್​ ರಾಜ್​ಕುಮಾರ್​ ಅವರ ಭಾವಚಿತ್ರ ಇರುವ ಫೋಟೋ ವೈರಲ್​ ಆಗಿದೆ.

ಹಲವು ಇಲಾಖೆಗಳ ರಾಯಭಾರಿಯಾಗಿದ್ದ ನಟ ಪುನೀತ್​ ರಾಜ್​ಕುಮಾರ್​ ಅವರು ನಂದಿನಿ ಉತ್ಪನ್ನಗಳ ಜಾಹೀರಾತಿಗೆ ಬಿಡಿಗಾಸನ್ನೂ ಪಡೆದಿರಲಿಲ್ಲ. ಉಚಿತವಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡು ಕೆಎಂಎಫ್ ಉತ್ಪನ್ನಗಳಿಗೆ ಪ್ರಚಾರ ನೀಡಿ ಹಾಲು ಒಕ್ಕೂಟದ ರಾಯಭಾರಿಯಾಗಿ ರೈತಾಪಿ ಸಮೂಹದ ಮೆಚ್ಚುಗೆ ಗಳಿಸಿದ್ದರು.

ಕೆಎಂಎಫ್​ ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಪ್ಪು, ಹಣ ಪಡೆಯುತ್ತಿರಲಿಲ್ಲ. ಅಪ್ಪು ನಿಧನ ಸುದ್ದಿ ಇಡೀ ಕರುನಾಡಿಗೆ ದೊಡ್ಡ ಆಘಾತವನ್ನೇ ತಂದೊಡ್ಡಿತ್ತು. ಅಪ್ಪು ನಮ್ಮನ್ನಗಲಿ 2 ತಿಂಗಳು ಕಳೆದರೂ ಆ ನೋವು ಇನ್ನೂ ಹಸಿಯಾಗೆ ಇದೆ. ಅಪ್ಪು ಅವರ ಕೋಟ್ಯಂತರ ಅಭಿಮಾನಿಗಳು ನೆಚ್ಚಿನ ನಟನ ಹೆಸರಲ್ಲಿ ವಿಭಿನ್ನ ಕಾರ್ಯಕ್ರಮ ನಡೆಸುತ್ತಲೇ ಇದ್ದಾರೆ. ಇದೀಗ ಕೆಎಂಎಫ್​ ಹಾಲಿನ ಪ್ಯಾಕೆಟ್​ನಲ್ಲಿ ಅಪ್ಪು ಭಾವಚಿತ್ರ ಇರುವ ಫೋಟೋ ವೈರಲ್​ ಆಗಿದೆ. ಇದನ್ನು ಕಂಡ ನಾಡಿನ ಜನತೆ ಭಾವುಕರಾಗಿದ್ದಾರೆ. ಇನ್ನು ಕೆಎಂಎಫ್​ನಿಂದಲೇ ನಿಜಕ್ಕೂ ಹಾಲಿನ ಪ್ಯಾಕೆಟ್​ ಮೇಲೆ ಫೋಟೋ ಮುದ್ರಿಸಿದೆಯಾ ಎಂಬುದು ಸ್ಪಷ್ಟವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net