ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಯುತ್ತಾ? ಕನ್ಯಾಪೊರೆ ಇರಲಿಲ್ಲ ಅಂದ್ರೆ ಏನರ್ಥ?

New Project
Published on

ಬೆಂಗಳೂರು: ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗೆ 'ಮೊದಲ ರಾತ್ರಿ' ಜೀವನದ ಪ್ರಮುಖ ಘಟ್ಟ. ಇಂತಹ ಮೊದಲ ರಾತ್ರಿಯಲ್ಲಿ ಈ ಹಿಂದೆ ಮದುಮಗಳ ಕನ್ಯತ್ವ ಪರೀಕ್ಷೆ ನಡೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅಷ್ಟಾಗಿ ಇದು ಇಲ್ಲವಾದರೂ ಕೆಲವರಿಗೆ ಈ ಬಗ್ಗೆ ಕುತೂಹಲ, ಅನುಮಾನ ಇದ್ದೇ ಇದೆ.

ಗಂಡು-ಹೆಣ್ಣಿನ ಪ್ರಥಮ ಸಮಾಗಮದಲ್ಲಿ ರಕ್ತಸ್ರಾವವಾದರೆ ಮಾತ್ರ ಆಕೆಯನ್ನ ಕನ್ಯೆ, ಆಕೆ ವರ್ಜಿನ್​ ಎಂದು ಹಿಂದಿನ ಕಾಲದಲ್ಲಿ ಹೇಳುತ್ತಿದ್ದರು. ಆದರೆ ಇದೊಂದುಮೂಢನಂಬಿಕೆ. ಮೊದಲ ರಾತ್ರಿಯ ಮಿಲನದಲ್ಲಿ ಪತ್ನಿಯ ಕನ್ಯಾಪೊರೆ ಹರಿಯಲಿಲ್ಲವೆಂದರೆ ಆಕೆ ಕನ್ಯೆಯಲ್ಲ, ವಿವಾಹ ಪೂರ್ವ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಳೇನೋ ಎಂಬ ಅನುಮಾನದ ಭೂತ ಕಾಡುತ್ತಾ ಇಡೀ ಸಂಸಾರವೇ ಹಾಳಾದ ಸಾಕಷ್ಟು ಉದಾಹರಣೆಗಳು ನಮ್ಮ ನಡುವೆ ಇವೆ. ಕನ್ಯಾಪೊರೆ ಕುರಿತಾಗಿ ಕೆಲವರಿಗೆ ಇರುವ ಅಜ್ಞಾನವೇ ಇದಕ್ಕೆಲ್ಲ ಕಾರಣ.

ಈ ಕುರಿತು ಡಾ. ಮಹಾಂತೇಶ ಹೀರೆಮಠ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ಕನ್ಯಾಪೊರೆ ಕನ್ಯತ್ವದ ಸಂಕೇತವಲ್ಲ. ಯೋನಿಯಲ್ಲಿ ತೆಳುವಾದ ಪದರವೊಂದು ಇರುತ್ತೆ. ಇದನ್ನೇ ಕನ್ಯಾಪೊರೆ ಎನ್ನುತ್ತಾರೆ. ಇದು ಹುಟ್ಟುತ್ತಾನೇ ಹೋಗಿರಬಹುದು. ಕೆಲವರಿಗೆ ಮುಟ್ಟಾದ 5-6 ವರ್ಷ ಆದ ಮೇಲೆ ಹೋಗಬಹುದು. ಕೆಲ ಹೆಣ್ಣುಮಕ್ಕಳು ಸೈಕ್ಲಿಂಗ್​, ರನ್ನಿಂಗ್​, ಸ್ವಿಮ್ಮಿಂಗ್​... ಅಂತ ಸಿಕ್ಕಾಪಟ್ಟೆ ಆ್ಯಕ್ಟಿವ್​ ಇರ್ತಾರೆ. ಆಗ ಈ ಪೊರೆ ಹೋಗಿರಬಹುದು. ಹಾಗಂತ ಇವರನ್ನ ಕನ್ಯೆ ಅಲ್ಲ, ಮದುವೆಗೂ ಮೊದಲೇ ಯಾವುದೋ ಸಂಬಂಧ ಇದ್ದಿರಬೇಕು ಎಂದೆಲ್ಲಾ ಯೋಚಿಸುವುದು ಮೂರ್ಖತನ. ಲೈಂಗಿಕ ಶಿಕ್ಷಣದ ಕೊರತೆ, ಕನ್ಯತ್ವ ಬಗೆಗಿನ ತಪ್ಪು ಗ್ರಹಿಕೆ ಮತ್ತು ತಪ್ಪು ಕಲ್ಪನೆಗಳಿಂದ ಹೊರ ಬಂದಾಗ ಮಾತ್ರವೇ ಕನ್ಯತ್ವ ಪರೀಕ್ಷೆ ಎಂಬ ಮೂಢನಂಬಿಕೆಗೆ ಅಳಿಯುತ್ತೆ ಎಂದು ಡಾ.ಮಹಾಂತೇಶ ಹೀರೆಮಠ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net