

ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ಓರ್ವ ನರಹಂತಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ನಾಗಠಾಣ ವ್ಯಾಪ್ತಿಯಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಕಟೀಲ್, ರಾಜ್ಯದಲ್ಲಿ ನರಹಂತಕರೊಬ್ಬರು ಸಿಎಂ ಆಗಿದ್ದರು ಅಂದ್ರೆ ಅದು ಸಿದ್ದರಾಮಯ್ಯ. ಅವರ ಆಡಳಿತಾವಧಿಯಲ್ಲಿ 3 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಗ ಸಿದ್ದರಾಮಯ್ಯ ಕಣ್ಣೀರು ಹಾಕಿಲ್ಲ. ಬೆಳಗಾವಿ ವಿಧಾನಸೌಧದ ಎದುರು ರೈತ ವಿಠ್ಠಲ್ ಅರಭಾವಿ ಆತ್ಮಹತ್ಯೆ ಮಾಡಿಕೊಂಡರು. ಆಗ ಅವರ ಮನೆಗೆ ಸಿದ್ದರಾಮಯ್ಯ ಹಣ ನೀಡಲಿಲ್ಲ. ಗೋಹಂತಕರಿಗೆ ಸಿದ್ದರಾಮಯ್ಯ ರಕ್ಷಕರಾಗಿದ್ದರು ಎಂದು ಟೀಕಿಸಿದರು.
SDPI, PFI ನಿಂದ ಭಯೋತ್ಪಾನಾ ಚಟುವಟಿಕೆ ಪ್ರಾರಂಭವಾಗಿವೆ. ಹತ್ಯೆ ಮಾಡುವ ಕೆಲಸ ಶುರುವಾಗಿವೆ, ಇದಕ್ಕೆ ಕಾರಣ ಸಿದ್ದರಾಮಯ್ಯ. ಅವರ ಕಾಲಘಟ್ಟದಲ್ಲಿ ಜೈಲಲ್ಲಿರಬೇಕಿದ್ದ SDPI ಸೇರಿದಂತೆ ಕೆಲ ಸಂಘಟನೆಗಳ 2 ಸಾವಿರ ಕಾರ್ಯಕರ್ತರನ್ನ ಬಿಟ್ಟರು. ಮೈಸೂರಲ್ಲಿ ಶಾಸಕನಿಗೆ ಚೂರಿ ಹಾಕಿದಾಗ ಬಂಧಿಸಲಿಲ್ಲ. ಡ್ರಗ್ಸ್ ಮಾಫಿಯಾ, ಅಧಿಕಾರಿಗಳ ಆತ್ಮಹತ್ಯೆ ಆಗಿದ್ದೆಲ್ಲವೂ ಸಿದ್ದರಾಮಯ್ಯರ ಕಾಲದಲ್ಲೇ ಎಂದು ಕಟೀಲ್ ಆರೋಪಿಸಿದರು.