VIDEO| ಸಿಎಂ ಬರ್ತಾರೆ ಅಂತ ಗುಂಡಿಬಿದ್ದ ರಸ್ತೆಗೆ ದಿಢೀರ್​ ತೇಪೆ ಹಾಕಿದ್ರು!

ಸಿಎಂ ಬರ್ತಾರೆ ಅಂತ ಗುಂಡಿಬಿದ್ದ ರಸ್ತೆಗೆ ದಿಢೀರ್​ ತೇಪೆ! - youtube
Published on

ಮೈಸೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಸೋಮವಾರ ನಾಡದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಕೋವಿಡ್ ನಿಯಂತ್ರಣ ಕುರಿತು ಜಿಲ್ಲಾಧಿಕಾರಿ ಜತೆ ಸಭೆ ನಡೆಸಲೆಂದು ಮೈಸೂರಿಗೆ ಬಂದಿದ್ದಾರೆ. ಇದಾದ ಬಳಿಕ ಸುತ್ತೂರು ಕ್ಷೇತ್ರಕ್ಕೂ ಸಿಎಂ ಭೇಟಿ ಕೊಡ್ತಾರೆ.

ಇದಕ್ಕೂ ಮುನ್ನ ಸಿಎಂ ಬರುವ ಸುದ್ದಿ ತಿಳಿಯುತ್ತಿದ್ದಂತೆ ಗುಂಡಿ ಬಿದ್ದ ರಸ್ತೆಗೆ ತೇಪೆ ಹಾಕುವ ಕೆಲಸ ನಡೆದಿದೆ. ಸುತ್ತೂರಿಗೆ ಹೋಗುವ ರಸ್ತೆ ಹದಗೆಟ್ಟಿದ್ದು, ಸಾರ್ವಜನಿಕರು ದೂರು ನೀಡಿದರೂ ಇಷ್ಟು ದಿನ‌ ಗುಂಡಿ ಮುಚ್ಚಿರಲಿಲ್ಲ. ಆದರೆ, ಇಂದು ಸಿಎಂ ಬರ್ತಾರೆ ಅಂತ ತರಾತುರಿಯಲ್ಲಿ ಗುಂಡಿ‌ ಮುಚ್ಚುವ ಕೆಲಸ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net