ತಿಮ್ಮಪ್ಪನ ಸನ್ನಿಧಿಗೆ ಹಿಂದೂ ಮಹಿಳೆಯನ್ನು ಬೆನ್ನ ಮೇಲೆ ಹೊತ್ತೊಯ್ದ ಮುಸ್ಲಿಂ ಯೋಧ!

tirupati
Published on

ತಿರುಪತಿ: ಹಿಂದೂಗಳು ಪೂಜಿಸುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟಿದ್ದ ಮಹಿಳೆಯೊಬ್ಬಳನ್ನು ಮುಸ್ಲಿಂ ಯೋಧ ಹೆಗಲ ಮೇಲೆ ಹೊತ್ತೊಯ್ದಿರುವ ಘಟನೆ ಇತ್ತೀಚೆಗೆ ವರದಿಯಾಗಿದೆ. ಸೇವಾ ಭಾವವನ್ನು ತೋರಿದ ಯೋಧನಿಗೆ ಬಗ್ಗೆ ನೆಟ್ಟಿಗರು ಶಹಬ್ಬಾಸ್​ ಎನ್ನಲಾರಂಭಿಸಿದ್ದಾರೆ.

58 ವರ್ಷದ ಮಹಿಳೆ ಮಂಗಿ ನಾಗೇಶ್ವರಮ್ಮ ಡಿಸೆಂಬರ್​ 22 ಮತ್ತು 23ರಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದರು. ಮಟ್ಟಿಲು ಹತ್ತಿ ಹೋಗಿ ದೇವರ ದರ್ಶನ ಮಾಡಲು ಅವರು ಮುಂದಾಗಿದ್ದಾರೆ. ದೇವಸ್ಥಾನಕ್ಕೆ ಆರು ಕಿ.ಮೀ ದೂರವಿದ್ದಾಗ ನಾಗೇಶ್ವರಮ್ಮ ಅವರಿಗೆ ಬಿಪಿ ಕಡಿಮೆಯಾಗಿದ್ದು, ಆಕೆ ನಡೆಯಲಾಗದ ಸ್ಥಿತಿ ತಲುಪಿದ್ದಾರೆ. ಆ ವೇಳೆ ಆ ಸ್ಥಳದಲ್ಲಿ ಮುಸ್ಲಿಂ ಯೋಧ ಶೇಖ್ ಅರ್ಷದ್​ನನ್ನು ಯಾತ್ರಿಕರ ಮೇಲ್ವಿಚಾರಣೆಗೆ ನೇಮಿಸಲಾಗಿತ್ತು.

ನಾಗೇಶ್ವರಮ್ಮನ ಕಷ್ಟವನ್ನು ನೋಡಲಾಗದ ಶೇಖ್​ ಅರ್ಷದ್​, ಆಕೆಯನ್ನು ಮೊದಲು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಪ್ರಥಮ ಚಿಕಿತ್ಸೆ ನೀಡಿಸಿ, ನಂತರ ಆಕೆಯನ್ನು ಹೆಗಲ ಬೆನ್ನಿನ ಮೇಲೆ ಕೂರಿಸಿಕೊಂಡು ಹೊತ್ತೊಯ್ದಿದ್ದಾನೆ. ಆರು ಕಿ.ಮೀ ದೂರ ನಾಗೇಶ್ವರಮ್ಮನನ್ನು ಹೊತ್ತೊಯ್ದು, ದೇವಸ್ಥಾನಕ್ಕೆ ತಲುಪಿಸಿ, ಕೆಲಸಕ್ಕೆ ಮರಳಿದ್ದಾನೆ.

ಶೇಖ್​ ಅರ್ಷದ್​ನ ಈ ಕೆಲಸಕ್ಕೆ ಭಕ್ತಾದಿಗಳು ಹಾಗೂ ನೆಟ್ಟಿಗರು ಶಹಬ್ಬಾಸ್​ ಹೇಳಲಾರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net