VIDEO| ಮಮತಾ ಬ್ಯಾನರ್ಜಿ ಮಸ್ತ್​ ಡ್ಯಾನ್ಸ್​! ವೇದಿಕೆ ಮೇಲೆ ಕುಣಿದು ರಂಜಿಸಿದ ದೀದಿ

ಂಆಂಥಃಆ
Published on

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಹಲವು ತಿಂಗಳುಗಳು ಬಾಕಿಯಿರುವಾಗಲೇ ಚುನಾವಣಾ ಪ್ರಚಾರದ ರಂಗು ಹೆಚ್ಚಲಾರಂಭಿಸಿದೆ. ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲಿಸುವ ಪಣ ತೊಟ್ಟಿದ್ದರೆ, ಟಿಎಂಸಿಯ ಮಮತಾ ಬ್ಯಾನರ್ಜಿ ಅವರು ಟಿಎಂಸಿಯನ್ನು ಮತ್ತೊಮ್ಮೆ ಆಡಳಿತಕ್ಕೆ ತಂದೇ ತರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ಚುನಾವಣಾ ಪ್ರಚಾರಗಳ ನಡುವೆ ಸಂಗೀತ ಉತ್ಸವವನ್ನು ನಡೆಸಲಾಗುತ್ತಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಮಮತಾ ಬ್ಯಾನರ್ಜಿ ಅವರು ಖ್ಯಾತ ಸಂತಲ್ ನರ್ತಕಿ ಬಸಂತಿ ಹೆಂಬ್ರಾಮ್ ಜತೆ ಹೆಜ್ಜೆ ಹಾಕಿದ್ದಾರೆ. ಅವರ ನೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಮಮತಾ ಅವರ ನೃತ್ಯದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:

ಉತ್ಸವದಲ್ಲಿ ಸಂಗೀತಗಾರರು, ಗಾಯಕರು ಮತ್ತು ನರ್ತಕರು ಸೇರಿದಂತೆ ಹಲವಾರು ಜಾನಪದ ಕಲಾವಿದರನ್ನು ಗೌರವಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net