ನಾನೇಕೆ ಕಾಂಗ್ರೆಸ್​​ಗೆ ಹೋಗಲಿ? ಸ್ವಪಕ್ಷದವರೇ ಪಿತೂರಿ ನಡೆಸ್ತಿದ್ದಾರೆ: ಬಿಜೆಪಿ ಶಾಸಕ ಕುಮಾರಸ್ವಾಮಿ ಗರಂ

mp kumaraswamy
Published on

ಚಿಕ್ಕಮಗಳೂರು: ನಮ್ಮ ಪಕ್ಷದವರೇ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ನಾನು ಕಾಂಗ್ರೆಸ್ ಸೇರುತ್ತೇನೆಂದು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

ನಾನೇಕೆ ಕಾಂಗ್ರೆಸ್​ಗೆ ಹೋಗಲಿ, ನಾನು ಪಕ್ಷದ ನಿಷ್ಠಾಂವತ ಕಾರ್ಯಕರ್ತ. ಬಿಜೆಪಿ ಪಕ್ಷವು ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ನಾನು ಕಾಂಗ್ರೆಸ್ ಸೇರುವುದು ಸುಳ್ಳು, ಇದನ್ನ ಯಾರೂ ನಂಬಲ್ಲ. ಸಂಪುಟ ಪುನರ್ ರಚನೆ, ಬೋರ್ಡ್ ನೀಡುವ ಸಮಯದಲ್ಲಿ ಮಾತ್ರ ಅಪಪ್ರಚಾರ ನಡೆಯುತ್ತಿದೆ ಎಂದು ಗರಂ ಆಗಿದ್ದಾರೆ.

ನಾನು ಎಲ್ಲಿಯೂ ಬೋರ್ಡ್, ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಆದರೂ ಈ ವೇಳೆ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಹೊರಬರುತ್ತೆ. ಇದನ್ನ ವಿರೋಧ ಪಕ್ಷದವರಿಗಿಂತ ನಮ್ಮ ಪಕ್ಷದವರೇ ಮಾಡುತ್ತಿದ್ದಾರೆ. ನಮ್ಮವರೇ ಕೆಲವರು ಕಾಂಗ್ರೆಸ್ ಸೇರುವ ಸುಳ್ಳು ಸುದ್ದಿ ಹರಿ ಬಿಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net