ಚಲಿಸುತ್ತಿದ್ದ ಕಾರಿಗೆ ಬೆಂಕಿ

car fire
ಕುದುರೆಗುಂಡಿ ಸಮೀಪ ಶಾಟ್‌ಸರ್ಕ್ಯೂಟ್‌ನಿಂದ ಬೆಂಕಿಗಾಹುತಿಯಾದ ಕಾರು.
Published on

ಕೊಪ್ಪ: ಹರಿಹರಪುರದಿಂದ ಶಿವಮೊಗ್ಗಕ್ಕೆ ರಿಪೇರಿಗಾಗಿ ತರುತ್ತಿದ್ದ ಕಾರು ಶುಕ್ರವಾರ ಕುದುರೆಗುಂಡಿ ಸಮೀಪ ಶಾಟ್‌ಸರ್ಕ್ಯೂಟ್‌ನಿಂದ ಬೆಂಕಿಗಾಹುತಿಯಾಗಿದೆ.ಹರಿಹರಪುರ ಸಮೀಪದ ಬೆಳೆಗದ್ದೆಯ ಪ್ರಭಾಕರ್ ಅವರು ಕಾರನ್ನು ರಿಪೇರಿಗೆ ತೆಗೆದುಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ. ಕಾರಿನ ಮುಂಭಾಗದಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತು. ಕೆಲವೇ ಕ್ಷಣದಲ್ಲೇ ಬೆಂಕಿ ಕಾರನ್ನು ಆವರಿಸಿಕೊಂಡಿತು. ಅದೃಷ್ಟವಶಾತ್ ಚಾಲಕ ಪ್ರಭಾಕರ್ ಕಾರಿನಿಂದ ಇಳಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಬೆಂಕಿ ಕಂಡ ಸ್ಥಳೀಯರು ನಂದಿಸಲು ಯತ್ನಿಸಿದ್ದರು. ಅಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟುಕರಕಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net