55 ನೇ ವಯಸ್ಸಿನಲ್ಲಿ 17 ನೇ ಮಗುವಿಗೆ ಜನ್ಮ ನೀಡಿದ ತಾಯಿ! | Child birth

untitled-design-2025-09-01t181436866-68b5953ab86e4
Published on

Child birth: ತಮ್ಮ ಮೊಮ್ಮಕ್ಕಳನ್ನು ಪ್ರೀತಿಸುವ ವಯಸ್ಸಿನಲ್ಲಿ ರಾಜಸ್ಥಾನದ ಉದಯಪುರ ಜಿಲ್ಲೆಯ 55 ವರ್ಷದ ಮಹಿಳೆಯೊಬ್ಬರು 17 ನೇ ನವಜಾತ ಶಿಶುವಿಗೆ ಜನ್ಮ ನೀಡಿರುವ ಘಟನೆ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಕವರ ರಾಮ್ ಕಲ್ಬೆಲಿಯಾ ಎಂಬ ಸ್ಕ್ರ್ಯಾಪ್ ವ್ಯಾಪಾರಿಯನ್ನು ರೇಖಾ ವಿವಾಹವಾಗಿದ್ದು, ಈ ಬಾರಿ 17 ನೇ ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನು ಜಾಡೋಲ್ ಬ್ಲಾಕ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಿಶುವನ್ನು ನೋಡಲು ಸಂಬಂಧಿಕರು ಆಗಮಿಸಿದ್ದು ಸಂಚಲನ ಮೂಡಿಸಿದೆ.

ಉದಯಪುರದ ಕಲ್ಬೆಲಿಯಾ ಮನೆಯ ಜೀವನವು ಒಂದೇ ಸೂರಿನಡಿ ಮೂರು ತಲೆಮಾರುಗಳನ್ನು ದಾಟಿದ್ದು, "ನನ್ನ ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಅವರಲ್ಲಿ ಪ್ರತಿಯೊಬ್ಬರಿಗೂ ಎರಡು ಅಥವಾ ಮೂರು ಮಕ್ಕಳಿದ್ದಾರೆ" ಎಂದು ಕವಾರಾ ಹೇಳಿದ್ದಾರೆ. ಇದರರ್ಥ ರೇಖಾ ಅವರಿಗೆ ಈಗಾಗಲೇ ಮೊಮ್ಮಕ್ಕಳು ಸಹ ಇದ್ದಾರೆ ಎಂದು ತಿಳಿದುಬಂದಿದೆ.

ಈ ದಂಪತಿ ಸೀಮಿತ ಆದಾಯ ಹೊಂದಿದ್ದು, ಸ್ಕ್ರ್ಯಾಪ್ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ತನ್ನ ಮಕ್ಕಳ ಮದುವೆ ಮಾಡಲು ಬಡ್ಡಿಗೆ ಸಾಲ ತೆಗೆದುಕೊಳ್ಳಬೇಕಾಯಿತು. ಇನ್ನು ಈ ಕುಟುಂಬದ ಸದಸ್ಯರು ಇಲ್ಲಿಯವರೆಗೂ ಶಾಲೆಗೆ ಹೋಗಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಹೆರಿಗೆ ಬಗ್ಗೆ ಡಾ.ರೋಷನ್ ಹೇಳಿದ್ದೇನು?

ಈ ಹೆರಿಗೆಯ ಮೇಲ್ವಿಚಾರಣೆ ನಡೆಸಿದ ಸ್ತ್ರೀರೋಗ ತಜ್ಞ ಡಾ. ರೋಷನ್ ದರಂಗಿ ಮಾತನಾಡಿದ್ದು, ಆಸ್ಪತ್ರೆಗೆ ದಾಖಲಾಗುವ ಮುನ್ನ ರೇಖಾ ಕುಟುಂಬವು ಇದು ನಾಲ್ಕನೇ ಹೆರಿಗೆ ಎಂದು ಹೇಳಿಕೊಂಡಿತ್ತು. ಆದರೆ ಹೆರಿಗೆಯಾದ ಬಳಿಕ 17 ನೇ ಮಗು ಎಂದು ಮಾಹಿತಿ ತಿಳಿದಿದೆ.

ಡಾ. ಧರ್ಮೇಂದ್ರ ಹೇಳಿದ್ದೇನು?

ಜಾಡೋಲ್ ಕೇಂದ್ರದ ವೈದ್ಯರ ಪ್ರಕಾರ, ಹೆರಿಗೆಯು ವೈದ್ಯಕೀಯ ಸವಾಲಿಗಿಂತ ಕಡಿಮೆ ಏನಲ್ಲ. ಬುಡಕಟ್ಟು ಜನಾಂಗದವರ ಪ್ರಾಬಲ್ಯ ಇರುವಂತಹ ಈ ಪ್ರದೇಶಗಳಲ್ಲಿ ಶಿಕ್ಷಣ ಮತ್ತು ಅರಿವಿನ ಕೊರತೆಯು ಇಂತಹ ಸನ್ನಿವೇಶಗಳಿಗೆ ಕಾರಣವಾಗುತ್ತದೆ ಎಂದು ಡಾ. ಧರ್ಮೇಂದ್ರ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net