ಉಗುರು ಸುತ್ತಿಗೆ ತಕ್ಷಣವೇ ಪರಿಹಾರ! ಇಲ್ಲಿದೆ ನೋಡಿ ಮನೆಮದ್ದು..| home remedies

untitled-design-2025-09-01t172458970-68b5899862269
Published on

home remedies: ಉಗುರು ಸುತ್ತು (ಪ್ಯಾರಾನೈಕಿಯಾ) ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಉಗುರಿನ ಸುತ್ತಲಿನ ಚರ್ಮದಲ್ಲಿರುವ ಸೋಂಕಿನಿಂದಾಗಿ ಊತ, ಕೆಂಪು, ನೋವು ಅಥವಾ ಕೀವು ಉಂಟಾಗಿ ನೋವು ಬರಲಾರಂಭಿಸುತ್ತದೆ. ಈ ಸೋಂಕನ್ನು ಕಡಿಮೆ ಮಾಡಲು ಕೆಳಗಿರುವ ಮನೆಮದ್ದುಗಳನ್ನು ಬಳಸುವುದರಿಂದ ಬೇಗನೆ,ಉಗುರು ಸುತ್ತು ಕಡಿಮೆಯಾಗುತ್ತದೆ.

1. ಉಗುರು ಬೆಚ್ಚಗಿನ ನೀರು ಮತ್ತು ಉಪ್ಪು

ಒಂದು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕಾಯಿಸಿ ಅದಕ್ಕೆ 1 ಚಮಚ ಉಪ್ಪು ಬೆರೆಸಿ, ಉಗುರು ಸುತ್ತಾದ ಬೆರಳನ್ನು 10-15 ನಿಮಿಷ ದಿನಕ್ಕೆ 3 ಬಾರಿ ನೆನೆಸಿಡುವುದರಿಂದ ಸೋಂಕು ಕಡಿಮೆಯಾಗುತ್ತದೆ.

2. ಬೆಳ್ಳುಳ್ಳಿ

2 ಬೆಳ್ಳಳ್ಳಿಯನ್ನು ಪುಡಿಮಾಡಿ, ಸೋಂಕಿತ ಭಾಗಕ್ಕೆ ಹಚ್ಚಿ ರಾತ್ರಿಯಿಡೀ ಬಿಟ್ಟು ಬೆಳಗ್ಗೆ ತೊಳೆಯಿರಿ. ಇದರಲ್ಲಿರುವ ಆಂಟಿಫಂಗಲ್​ಗಳು ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ತೆಂಗಿನ ಎಣ್ಣೆ ಮತ್ತು ಅರಿಶಿನ

ಒಂದು ಚಮಚ ತೆಮಗಿನ ಎಣ್ಣೆಗೆ ಒಂದು ಚಿಟಿಕೆ ಅರಿಶಿಣ ಪುಡಿಯನ್ನು ಬೆರೆಸಿ ಹಚ್ಚಿ ಎರಡು ಗಂಟೆ ಬಿಟ್ಟು ತೊಳೆಯುವುದರಿಂದ ಇದರಲ್ಲಿರುವ ಆಂಟಿಬ್ಯಾಕ್ಟೀರಿಯಲ್​ಗುಣಗಳು ನೋವನ್ನು ಕಡಿಮೆ ಮಾಡುತ್ತದೆ.

ಗಮನಿಸಬೇಕಾದ ಅಂಶಗಳು

* ಮಧುಮೇಹ ಇರುವಂತವರು ಉಗುರು ಸುತ್ತು ಗಂಭೀರವಾಗಿ ಪರಿಣಾಮ ಬೀರುವುದರಿಂದ ಕೂಡಲೇ ವೈದ್ಯರ ಬಳಿ ಹೋಗುವುದು ಒಳ್ಳೆಯದು.

* ಉಗುರು ಸುತ್ತು ತೀವ್ರವಾಗಿ ಸೋಂಕಿನಿಂದ ಕೂಡಿದರೆ, ಕೀವು, ತೀವ್ರ ಊತ ಅಥವಾ ನೋವು ಹೆಚ್ಚಾದರೆ, ವೈದ್ಯಕೀಯ ಸಲಹೆಯನ್ನು ಪಡೆಯಿರಿ, ಏಕೆಂದರೆ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು.

* ಕೈಕಾಲುಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ. ಹಾಗೇ ಒಣಗಿಸಿ. ಉಗುರನ್ನು ಕತ್ತರಿಸುವಾಗ ಚರ್ಮಕ್ಕೆ ಗಾಯವಾಗದಂತೆ ಎಚ್ಚರಿಕೆ ವಹಿಸಿಕೊಳ್ಳಿ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net