ಮೈಗ್ರೇನ್ ತಲೆನೋವು ಹೆಚ್ಚಾಗಿ ಯುವಕರನ್ನೇ ಕಾಡುತ್ತದೆಯಂತೆ? ಹಾಗಿದ್ದರೆ, ಮೈಗ್ರೇನ್​ನಿಂದ ಹೊರಬರಲು ಈ ಸಲಹೆಗಳನ್ನು ಅನುಸರಿಸಿ..| Health tips

untitled-design-2025-09-01t163815725-68b57ea386dfe
Published on

Health tips : ಮೈಗ್ರೇನ್ ತಲೆನೋವು ಹೆಚ್ಚಾಗಿ ಯುವಕರಲ್ಲಿ ಕಂಡುಬರುವ ಒಂದು ಕಾಯಿಲೆಯಾಗಿದೆ. ಇದು ಸಾಮಾನ್ಯವಾಗಿ ಕೆಲಸ, ಶಿಕ್ಷಣ ಅಥವಾ ವೈಯಕ್ತಿಕ ಜೀವನದ ಒತ್ತಡವು ಮೈಗ್ರೇನ್​ ಗೆ ದಾರಿ ಮಾಡಿಕೊಡುತ್ತದೆ. ಇನ್ನು ಯುವಕರು ಮಾಡುವ ಅನಿಯಮಿತ ನಿದ್ರೆಯ ವೇಳಾಪಟ್ಟಿಯು ತಲೆನೋವನ್ನು ಉಂಟುಮಾಡುತ್ತದೆ. ಅತಿಯಾದ ಕೆಫೀನ್​ ಇರುವಂತಹ ಆಹಾರ ಪದಾರ್ಥಗಳು, ಚಾಕೊಲೇಟ್, ಗಿಣ್ಣು ಆಹಾರ ಅಥವಾ ಸಂಸ್ಕರಿತ ಆಹಾರ ಸೇವನೆಯಿಂದ ಮೈಗ್ರೇನ್ ಬರಬಹುದು.

ಯುವಕರು ಹೆಚ್ಚಾಗಿ ಬಳಸುವ ಮೊಬೈಲ್ ಅಥವಾ ಕಂಪ್ಯೂಟರ್ ಪರದೆಗೆ ಒಡ್ಡಿಕೊಳ್ಳುವುದರಿಂದ ಕಣ್ಣಿನ ಒತ್ತಡವು ತಲೆನೋವನ್ನು ಹೆಚ್ಚಿಸುತ್ತದೆ. ಇನ್ನು ಕೆಲವೊಬ್ಬರಿಗೆ ಹಾರ್ಮೋನ್​ ಬದಲಾವಣೆಗಳು, ವಿಶೇಷವಾಗಿ ಮಹಿಳೆಯರಲ್ಲಿ ಜೆನೆಟಿಕ್​ ಕಾರಣಗಳಿಂದಲೂ ಮೈಗ್ರೇನ್​ ಸಮಸಗ್ಯೆಗಳು ಹೆಚ್ಚಾಗಿ ಘ್ರಾಸವಾಗುತ್ತವೆ.

ಮೈಗ್ರೇನ್​ ಸಮಸ್ಯೆಗಳಿಗಿರುವ ಸಲಹೆಗಳೇನು?

ನೀರಿನ ಸೇವನೆ ಮತ್ತು ಆಹಾರ ಕ್ರಮ

ಯಾವುದೇ ವ್ಯಕ್ತಿಯು ಅತಿಯಾದ ಮೈಗ್ರೇನ್​ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರು ದಿನಕ್ಕೆ 3-4 ಲೀಟರ್​ ನೀರನ್ನು ಸೇವಿಸಿರಿ, ಏಕೆಂದರೆ ನಿರ್ಜಲೀಕರಣ ಮೈಗ್ರೇನ್‌ಗೆ ಕಾರಣವಾಗಬಹುದು. ಕೆಫೀನ್, ಚಾಕೊಲೇಟ್, ಗಿಣ್ಣು ಆಹಾರ, ಮತ್ತು ಸಂಸ್ಕರಿತ ಆಹಾರಗಳಂತವುಗಳನ್ನು ಸೇವಿಸುವುದನ್ನು ತಪ್ಪಿಸಿ. ಅದರ ಬದಲಿಗೆ ತಾಜಾ ಹಣ್ಣು, ತರಕಾರಿ, ಮತ್ತು ಸಮತೋಲಿತ ಆಹಾರ ಸೇವಿಸಿರಿ ಇದರಿಂದ ಮೈಗ್ರೇನ್​ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು.

ಸರಿಯಾದ ಪ್ರಮಾಣದ ನಿದ್ರೆ

ಪ್ರತಿದಿನ 7-8 ಗಂಟೆ ಉತ್ತಮ ನಿದ್ರೆ ಮಾಡಿ. ಅನಿಯಮಿತ ನಿದ್ರೆಯ ವೇಳಾಪಟ್ಟಿ ಮೈಗ್ರೇನ್‌ನ್ನು ಉಂಟುಮಾಡಬಹುದು. ಆದರಿಂದ ನಿಗದಿತ ಸಮಯಕ್ಕೆ ಮಲಗಿ, ಎದ್ದೇಳುವ ಅಭ್ಯಾಸ ಬೆಳೆಸಿಕೊಳ್ಳುವುದರಿಂದ ಮೈಗ್ರೇನ್ ಸಮಸ್ಯೆಯನ್ನು ತಡೆಯಬಹದು.

ಒತ್ತಡ ನಿರ್ವಹಣೆ

ಅತಿಯಾದ ಒತ್ತಡವು ಮೈಗ್ರೇನ್​ಗೆ ಕಾರಣವಾಗಿದೆ. ಆದರಿಂದ ಒತ್ತಡವನ್ನು ಕಡಿಮೆ ಮಾಡಲು ದಿನಕ್ಕೆ 10-15 ನಿಮಿಷ ಧ್ಯಾನ, ಯೋಗ, ಅಥವಾ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿ ಒತ್ತಡವನ್ನು ಕಡಿಮೆ ಮಾಡಿ.

ವ್ಯಾಯಾಮ ಮತ್ತು ಜೀವನಶೈಲಿ

ಮೈಗ್ರೇನ್​ ಸಮಸ್ಯೆಯಿಂದ ಬಳಲುತ್ತಿರುವವರು ದಿನಕ್ಕೆ 20-30 ನಿಮಿಷ ಲಘು ವ್ಯಾಯಾಮ ಅಂದರೆ, ನಡಿಯುವುದು, ಈಜುವುದು ಮಾಡಿ ಇದರಿಂದ ನಿಮ್ಮ ದೇಹ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಜೋರಾದ ಶಬ್ದ ಮತ್ತು ತೀವ್ರ ಬೆಳಕಿನಿಂದ ದೂರವಿರಿ.

ವೈದ್ಯಕೀಯ ಸಲಹೆ

ಅತಿಯಾದ ಮೈಗ್ರೇನ್​ ಇರುವಂತವರು ವೈದ್ಯರನ್ನು ಸಂಪರ್ಕಿಸಿ. ಔಷಧಿಗಳು ಅಥವಾ ತಡೆಗಟ್ಟುವ ಚಿಕಿತ್ಸೆಯ ಬಗ್ಗೆ ಸಲಹೆ ಪಡೆಯಿರಿ. ಅವರು ನೀಡುವ ಮಾರ್ಗ ಸೂಚಿಯನ್ನು ಅಭ್ಯಾಸ ಮಾಡಿ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net