

Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಆರಂಭಿಕ ದಿನವಾದ ಸೋಮವಾರ(ಸೆ.1) ಉತ್ತಮ ಲಾಭದೊಂದಿಗೆ ಮುಕ್ತಾಯಗೊಂಡಿವೆ.
ನಿಫ್ಟಿ50 ಸೂಚ್ಯಂಕವು 198 ಪಾಯಿಂಟ್ಗಳೊಂದಿಗೆ 24,625 ಪಾಯಿಂಟ್ಗಳಲ್ಲಿ ಮುಕ್ತಾಯಗೊಂಡರೆ, ಬಿಎಸ್ಇ ಸೆನ್ಸೆಕ್ಸ್ 555 ಪಾಯಿಂಟ್ಗಳೊಂದಿಗೆ 0.70% ಏರಿಕೆಯಾಗಿ 80,364 ಪಾಯಿಂಟ್ಗಳಲ್ಲಿ ಮುಕ್ತಾಯಗೊಂಡಿದೆ. ಕಳೆದ ವಾರ ಭಾರೀ ಕುಸಿತ ಕಂಡಿದ್ದ ಷೇರುಪೇಟೆ ಇದೀಗ ಆರೋಗ್ಯಕರ ಲಾಭದೊಂದಿಗೆ ಕೊನೆಗೊಂಡಿದೆ.
ಆದಾಗ್ಯೂ, ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ವಿಭಾಗಳು ಕಳಪೆ ಪ್ರದರ್ಶನ ನೀಡಿದವು. ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕ 1.64 ಏರಿಕೆಯಾದರೆ, ಸ್ಮಾಲ್ಕ್ಯಾಪ್ ಶೇ.1.49ರಷ್ಟು ಏರಿಕೆಗೊಂಡಿವೆ.(ಏಜೆನ್ಸೀಸ್)