ಶಿವಮೊಗ್ಗದಲ್ಲಿ ದುರಂತ: ಹಣ ವಾಪಸ್ ನೀಡದೆ ಸತಾಯಿಸುತ್ತಿದ್ದಾಕೆಯ ಮನೆ ಮುಂದೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ

shimoga
Published on

ಶಿವಮೊಗ್ಗ: ಕೊಟ್ಟ ಹಣ ವಾಪಸ್ ನೀಡದೆ ಸತಾಯಿಸುತ್ತಿದ್ದ ಮಹಿಳೆಯ ಮನೆ ಮುಂದೆಯೇ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ಹೊಸಮನೆ ಬಡಾವಣೆಯ ಮಂಜುನಾಥ (45) ಮೃತ ದುರ್ದೈವಿ. ಈತ ಮಹಿಳೆಯೊಬ್ಬರಿಗೆ 25 ಲಕ್ಷ ರೂ. ಸಾಲ ನೀಡಿದ್ದ. ಆದರೆ ಕೊಟ್ಟ ಹಣವನ್ನು ಮಹಿಳೆ ಹಿಂದಿರುಗಿಸಲು ಸತಾಯಿಸಿದ್ದರು. ಹಣ ಕೇಳಿದ್ದಕ್ಕೆ ಮಂಜುನಾಥನ ಮೇಲೆ ಮಹಿಳೆ ಮತ್ತು ಆಕೆಯ ಪುತ್ರ ಹಲ್ಲೆ ಕೂಡ ಮಾಡಿದ್ದರು.

ಇದರಿಂದ ಮನನೊಂದ ಮಂಜುನಾಥ ಸೋಮವಾರ ಬೆಳಗ್ಗೆ ಹೊಸಮನೆ ಬಡಾವಣೆಯ ಮಹಿಳೆ ಮನೆ ಎದುರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದಿದ್ದಾರೆ. ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net