

ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ 2ನೇ ಹಂತದ ಪಾದಯಾತ್ರೆ ಸೋಮವಾರ ಬಿಡದಿಯ ಬಾಲಗಂಗಾಧರನಾಥ ಸ್ವಾಮೀಜಿ ಸರ್ಕಲ್ ಬಳಿಯಿಂದ ಹೊರಟಿದೆ. ಈ ಬಾರಿಯೂ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕರ್ನಾಟಕ ಸಾಂಕ್ರಾಮಿಕ ರೋಗದ ಅಧಿನಿಯಮ ಅಡಿ ಡಿ.ಕೆ.ಶಿವಕುಮಾರ್ ಸೇರಿ 37 ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. A1 ಡಿ.ಕೆ ಶಿವಕುಮಾರ್, A2 ಸಿದ್ದರಾಮಯ್ಯ, A.3 ಡಿ.ಕೆ ಸುರೇಶ್, A.4 ಎಂಎಲ್ಸಿ ಎಸ್. ರವಿ... ಹೀಗೆ 37 ಜನರ ವಿರುದ್ಧ ಐಜೂರು ಪೊಲೀಸ್ ಠಾಣೆಯಲ್ಲಿ ರಾಮನಗರ ತಹಸೀಲ್ದಾರ್ ವಿಜಯ್ ಕುಮಾರ್ ದೂರು ದಾಖಲಿಸಿದ್ದಾರೆ.