

ಕೋಲಾರ: ಮಾರ್ಕಂಡೇಯ ಜಲಾಶಯದಲ್ಲಿ ಈಜಲು ಹೋಗಿದ್ದ ಬಿಎಂಟಿಸಿ ಬಸ್ ಚಾಲಕರೊಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬಂಗಾರಪೇಟೆ ತಾಲೂಕಿನ ಹಿರೇಕರಪನಹಳ್ಳಿ ನಿವಾಸಿ ಹರೀಶ್(28) ಮೃತ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕರಾಗಿದ್ದ ಹರೀಶ್, ರಜೆ ಹಿನ್ನೆಲೆ ಊರಿಗೆ ಬಂದಿದ್ದರು.
ಒಂದು ತಿಂಗಳಿಂದ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಕೆರೆ-ಕಟ್ಟೆಗಳು ಉಕ್ಕಿ ಹರಿಯುತ್ತಿವೆ. ಮಾರ್ಕಂಡೇಯ ಜಲಾಶಯಕ್ಕೂ ಅಪಾರ ಪ್ರಮಾಣದ ನೀರು ಬಂದಿದೆ. ಇದನ್ನು ನೋಡಲೆಂದು ಮಾಲೂರು ತಾಲೂಕಿನ ಮಾರ್ಕಂಡೇಯ ಜಲಾಶಯದ ಬಳಿ ಬಂದಿದ್ದ ಹರೀಶ್, ಈಜಲು ಹೋಗಿ ಅಲ್ಲೇ ಕೊನೆಯುಸಿರೆಳೆದಿದ್ದಾರೆ.