ಟೆಕ್ಕಿ ಜತೆ ರಿಸೆಪ್ಷನ್​ ಮಾಡ್ಕೊಂಡ ಚನ್ನಪಟ್ಟಣ ವಧು: ಮಧ್ಯರಾತ್ರಿ ಆಕೆ ಮಾಡಿದ ಕೆಲ್ಸಕ್ಕೆ ಮದ್ವೆಯೇ ಮುರಿದು ಬಿತ್ತು

wedding
Published on

ಚನ್ನಪಟ್ಟಣ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಬ್ಬರು ಟೆಕ್ಕಿ ಕುಟುಂಬಸ್ಥರು ಮದುವೆ ಸಂಭ್ರಮದಲ್ಲಿ ಮಿಂದೇಳಬೇಕಿತ್ತು. ಆದ್ರೆ, ಮದುಮಗಳು ರಾತ್ರೋರಾತ್ರಿ ಮಾಡಿದ ಆ ಕೆಲ್ಸಕ್ಕೆ ಇಡೀ ಮದುವೆ ಮನೆಯಲ್ಲಿ ಗದ್ದಲ್ಲ ಸೃಷ್ಟಿಯಾಗಿತ್ತು. ಮದುವೆ ಮುರಿದು ಬಿದ್ದು, ವರ ಬೇಸರದಿಂದಲೇ ವಾಪಸ್​ ಹೋದರು. ಆಕೆಯ ಕುಟುಂಬಸ್ಥರೂ ಭಾರಿ ಮುಜುಗರಕ್ಕೊಳಗಾಗಿ ಆತಂಕದಿಂದಲೇ ಮನೆಯತ್ತ ತೆರಳಿದರು.

ರಾಮನಗರ ಜಿಲ್ಲೆ ಚನ್ನಪಟ್ಟಣ ಹೊರವಲಯದ ಕಲ್ಯಾಣಮಂಟಪದಲ್ಲಿ ಬುಧವಾರ ಬೆಳಗ್ಗೆ ಈ ದೃಶ್ಯ ಕಂಡು ಬಂತು. ಬೆಂಗಳೂರು ಮೂಲದ ಯುವಕನೊಂದಿಗೆ ಚನ್ನಪಟ್ಟಣದ ಯುವತಿ ಜತೆ ಹಿರಿಯರ ಸಮ್ಮುಖದಲ್ಲಿ ವಿವಾಹ ನಿಶ್ಚಯವಾಗಿತ್ತು. ಯುವಕ-ಯುವತಿ ಇಬ್ಬರೂ ಬಿಇ ಪದವೀಧರರು. ಇವರಿಬ್ಬರ ಮದುವೆ ಚನ್ನಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ನಿಗದಿಯಾಗಿತ್ತು. ಅದರಂತೆ ಮಂಗಳವಾರ ರಾತ್ರಿ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನೇರವೇರಿತ್ತು. ಆರತಕ್ಷತೆಯಲ್ಲಿ ಸಂತೋಷದಿಂದಲೇ ಮದುಮಗನೊಂದಿಗೆ ಫೋಟೋಶೂಟ್​ ಕೂಡ ಮಾಡಿಸಿಕೊಂಡಿದ್ದಳು. ಬುಧವಾರ ಬೆಳಗ್ಗೆ ಧಾರಾಮುಹೂರ್ತ ಇತ್ತು.

ಆದರೆ, ಆರತಕ್ಷತೆ ಮುಗಿದ ಬಳಿಕ ಕುಟುಂಬದ ಎಲ್ಲರೂ ನಿದ್ರೆಗೆ ಜಾರಿದ್ದರು. ಆದರೆ ಮದುಮಗಳು ಮಾತ್ರ ಅಂದು ಮಧ್ಯರಾತ್ರಿಯೇ ಪರಾರಿಯಾಗಿದ್ದಾಳೆ. ಆತಂಕಕ್ಕೆ ಒಳಗಾದ ವಧುವಿನ ಕುಟುಂಬಸ್ಥರು ಬುಧವಾರ ಬೆಳಗ್ಗೆಯೇ ಕಲ್ಯಾಣಮಂಟಪ ಖಾಲಿ ಮಾಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಿಯಕರನೊಂದಿಗೆ ಮಧುಮಗಳು ಪರಾರಿಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net