ಕೈ ತೊಳೆಯಲೆಂದು ಕೆರೆಗೆ ಹೋದ ವ್ಯಕ್ತಿ ಕಾಲುಜಾರಿ ಬಿದ್ದು ಸಾವು

kodgu
Published on

ಕೊಡಗು: ಕೈ ತೊಳೆಯಲೆಂದು ಕೆರೆಗೆ ಹೋದ ವ್ಯಕ್ತಿ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ಪೊನ್ನಂಪೇಟೆ ತಾಲೂಕಿನ ಚಿಕ್ಕಮುಂಡೂರು ಗ್ರಾಮದಲ್ಲಿ ನಡೆದಿದೆ.

ಅಜ್ಜಿಕುಟ್ಟೀರ ಭೀಮಯ್ಯ (67) ಸಾವನ್ನಪ್ಪಿರುವ ದುರ್ದೈವಿ. ಮೃತರು ಚಿಕ್ಕಮುಂಡೂರು ಗ್ರಾಮದ ನಿವಾಸಿದ್ದಾರೆ. ಕಾಲು ಜಾರಿ ಕೆರೆಗೆ ಬಿದ್ದು, ಭೀಮಯ್ಯ ಪ್ರಾಣ ಕಳೆದುಕೊಂಡಿದ್ದಾರೆ.

ಭೀಮಯ್ಯ ದನಗಳನ್ನು ಕಟ್ಟಿ ಕೈ ತೊಳೆಯಲೆಂದು ಕೆರೆಗೆ ಹೋಗಿದ್ದಾನೆ. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಭೀಮಯ್ಯನ ಪ್ರಾಣ ಪಕ್ಷಿ ಹಾರಿ ಹೋಗಿದೆ ಎನ್ನಲಾಗಿದೆ.

ಸ್ಥಳಕ್ಕೆ ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆಗೆ ಗೋಣಿಕೊಪ್ಪಲು ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net