

ಇಸ್ಲಾಮಾಬಾದ್: ಜನಸಾಮಾನ್ಯರ ಮೇಲೆ ಪರಿಣಾಮ ಬೀರಿರುವ ತನ್ನ ಕೆಟ್ಟ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ಪಾಕಿಸ್ತಾನ ತತ್ತರಿಸುತ್ತಿದೆ. ರಾಷ್ಟ್ರವು ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಗಗನಕ್ಕೇರುತ್ತಿರುವ ಹಣದುಬ್ಬರವನ್ನು ಎದುರಿಸುತ್ತಿರುವಾಗ, ಪಾಕಿಸ್ತಾನದ ಜನರ ಈ ಆರ್ಥಿಕ ಸುರಕ್ಷತಾ ಜಾಲವು ಸವೆದುಹೋಗುತ್ತಿದೆ. ಇತ್ತ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಪ್ ಅವರು ತಮ್ಮ ದೇಶದ ಆರ್ಥಿಕ ಪರಿಸ್ಥಿತಿ ಕುರಿತಾಗಿ ಟೀಕೆ ಮಾಡಿದ್ದಾರೆ.
ಭಾರತ ಚಂದ್ರಯಾನ -3ಯನ್ನು ಯಶ್ವಸಿಯಾಗಿದೆ, ಈ ಮೂಲಕ ಭಾರತ ಚಂದ್ರನಲ್ಲಿ ಕಾಲಿಟ್ಟಿದೆ. ಜಿ-20 ಶೃಂಗಸಭೆ ನಡೆಸಿ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದೆ. ಆದರೆ ಪಾಕಿಸ್ತಾನ ಏನು? ಮಾಡುತ್ತಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಪ್ ಹೇಳಿದ್ದಾರೆ.
ತಮ್ಮ ಪಕ್ಷದ ಪಿಎಂಎಲ್ (ಎನ್) ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಚಂದ್ರನನ್ನು ತಲುಪಿದೆ ಮತ್ತು ಜಿ 20 ಶೃಂಗಸಭೆಯನ್ನು ಯಶಸ್ವಿಯಾಗಿದೆ. ಪಾಕಿಸ್ತಾನದ ಪ್ರಧಾನಿ ನಿಧಿಗಾಗಿ ಭಿಕ್ಷೆ ಬೇಡಲು ವಿದೇಶಗಳಿಗೆ ಹೋಗುತ್ತಿದ್ದಾರೆ. ಇದೇ ರೀತಿಯ ಸಾಧನೆಯನ್ನು ಪಾಕಿಸ್ತಾನಕ್ಕೆ ಏಕೆ ಸಾಧಿಸಲು ಸಾಧ್ಯವಾಗಲಿಲ್ಲ? ನಮ್ಮ ರಾಜ್ಯಕ್ಕೆ ಯಾರು ಹೊಣೆ? ಎಂದು ಪಾಕಿಸ್ತಾನದ ಪ್ರಸ್ತುತ ಆರ್ಥಿಕತೆಯ ಸ್ಥಿತಿಯ ಬಗ್ಗೆ ಟೀಕಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನಿಯಾದಾಗ ಅವರ ಖಜಾನೆಯಲ್ಲಿ ಕೇವಲ ಒಂದು ಬಿಲಿಯನ್ ಡಾಲರ್ ಇತ್ತು. ಈಗ, ಅವರ ವಿದೇಶಿ ವಿನಿಮಯ ಸಂಗ್ರಹವು 600 ಶತಕೋಟಿಗೆ ಏರಿದೆ. ಪಾಕಿಸ್ತಾನ ಇನ್ನೂ ಒಂದು ಶತಕೋಟಿ ಡಾಲರ್ಗೆ ಇತರ ದೇಶಗಳ ಮುಂದೆ ಭಿಕ್ಷೆ ಬೇಡಬೇಕಾಗಿದೆ. ನಮ್ಮ ಸ್ಥಿತಿ ಎಲ್ಲಿಗೆ ಬಂದಿದೆ? ಭಾರತದ ಮುಂದೆ ಯಾವ ಹಂತಕ್ಕೆ ಬಂದು ನಿಲ್ಲಲಿದ್ದೇವೆ? ನಾವು ಇಂದಿಗೂ ಚೀನಾ ಮತ್ತು ಗಲ್ಫ್ನಿಂದ ಹಣವನ್ನು ಕೇಳುತ್ತಿದ್ದೇವೆ ಎಂದು ಹೇಳಿದರು.
.