ಇವನೆಂಥಾ ದುರುಳ...ಹೊಟ್ಟೆಗೆ ಸಾರಾಯಿ ಬೀಳುತ್ತಿದ್ದಂತೆ ಮಾಡಿಯೇಬಿಟ್ಟ ಭೀಕರ ಕೃತ್ಯ

Alchol 23 May 20
Published on

ಧಾರವಾಡ: ಕೆಲವರಿಗೆ ಹೊಟ್ಟೆಗೆ ಸಾರಾಯಿ ಹೋದರೆ ಸಾಕು ಕ್ರೌರ್ಯ ಹೊರಗೆ ಬರುತ್ತದೆ. ತಾವೇನು ಮಾಡುತ್ತಿದ್ದೇವೆ ಎಂಬ ಪರಿವೆಯೂ ಇರುವುದಿಲ್ಲ.

ಹಾಗೇ ಇಲ್ಲೊಬ್ಬ ದುಷ್ಟ ಪತಿ ಕುಡಿದ ಮತ್ತಿನಲ್ಲಿ ಪತ್ನಿ ಮತ್ತು ಮಗಳಿಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ತಾನೂ ಅದೇ ಬೆಂಕಿಗೆ ಜೀವತೆತ್ತಿದ್ದಾನೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಘಟನೆ ನಡೆದಿತ್ತು. ಮೂವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರೋಪಿ ಭೀರಪ್ಪ ಕಟಿಗಾರ (40) ಹಾಗೂ ಆತನ ಪತ್ನಿ ಪಕ್ಕಿರವ್ವ (34) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

12ವರ್ಷದ ಮಗಳು ಯಲ್ಲವ್ವ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ನವಲಗುಂದ‌ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net