ಪತ್ನಿಗೆ ಭಯ ಪಡಿಸಲು ಪೆಟ್ರೋಲ್ ಸುರಿದು ಬೆಂಕಿ ಇಟ್ಟುಕೊಂಡ; ಸಾವು ಬದುಕಿನ ಮಧ್ಯೆ ಹೋರಾಟ

man crime
Published on

ತುಮಕೂರು: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಪತ್ನಿಗೆ ಭಯ ಪಡಿಸಲು ಹೋಗಿ ಪೆಟ್ರೋಲ್ ಸುರಿದುಕೊಂಡು ಜೀವಕ್ಕೆ ಬಂತು ಆಪತ್ತು ತಂದುಕೊಂಡಿರುವ ಘಟನೆ ನಡೆದಿದೆ.

ವಿನೋದ್ (38) ಆತ್ಮಹತ್ಯೆಗೆ ಯತ್ನಿಸಿದ ಅಸಾಮಿ. ಪತ್ನಿಗೆ ಭಯ ಪಡಿಸಲು ಪೆಟ್ರೋಲ್ ಸುರಿದುಕೊಂಡು ಬೆಂಕಿ ಇಟ್ಟುಕೊಂಡಿರುವ ಘಟನೆ ಕೊರಟಗೆರೆ ತಾಲೂಕಿನ ತಂಗನಹಳ್ಳಿಯಲ್ಲಿ ತಡರಾತ್ರಿ ನಡೆದಿರುವ ಘಟನೆ.

ಪ್ರತಿದಿನ ಕುಡಿದ ಮತ್ತಿನಲ್ಲಿ ಪತ್ನಿ ಜತೆ ಜಗಳ ಮಾಡುತ್ತಿದ್ದ ವಿನೋದ್, ನಿನ್ನೆ ರಾತ್ರಿ ಕೂಡಾ ಕುಡಿದ ಅಮಲಿನಲ್ಲಿ ಪತ್ನಿ ಜೊತೆ ಗಲಾಟೆ ತೆಗೆದಿದ್ದಾನೆ. ಈ ವೇಳೆ ಪತ್ನಿಗೆ ಭಯಪಡಿಸಲು ಪೆಟ್ರೋಲ್​​ನ್ನು ಮೈ ಮೇಲೆ ಸುರಿದು ಕೊಂಡು ಬೆಂಕಿ ಹಾಕಿಕೊಳ್ಳುವುದಾಗಿ ಬೆದರಿಸಲು ಮುಂದಾಗಿದ್ದ.

ಈ ವೇಳೆ ವಿನೋದ್​ಗೆ ಬೆಂಕಿ ಹೊತ್ತಿಕೊಂಡಿದೆ. ವಿನೋದ್ ದೇಹ ಬಹುತೇಕ ಬೆಂಕಿಯಲ್ಲಿ ಸುಟ್ಟು ಗಾಯಗಳಾಗಿದ್ದು, ಸಾವು ಬದುಕಿನ ಜತೆ ನರಳಾಡುತ್ತಿದ್ದಾನೆ. ಕೂಡಲೇ ಸ್ಥಳೀಯರು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕ್ಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿದೆ.

ಸ್ಥಳಕ್ಕೆ ಕೋಳಾಲಾ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕೋಳಾಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net