

Man killed Sister in Law: ತನ್ನ ಪತ್ನಿ ಬೇರೊಬ್ಬ ಪುರುಷನೊಂದಿಗೆ ಓಡಿಹೋಗಲು ಸಹಾಯ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತ ಪಡಿಸಿದ ವ್ಯಕ್ತಿಯೊಬ್ಬ ಅತ್ತಿಗೆಯನ್ನು ಕತ್ತಿಯಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದೆಹಲಿಯ ಖುಯಾದಲ್ಲಿ ಮಂಗಳವಾರ (ಸೆಪ್ಟೆಂಬರ್ 22) ನಡೆದಿದೆ.
ಆರೋಪಿಯನ್ನು ಇಸ್ತೇಕರ್ ಅಹ್ಮದ್ (49) ಗಾಜಿಯಾಬಾದ್ನ ಲೋನಿ ನಿವಾಸಿ ಎಂದು ತಿಳಿಸಲಾಗಿದೆ. ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ನುಸ್ರತ್ (39) ಅವರನ್ನು ಈತ ಕತ್ತಿಯಿಂದ ಕೊಲೆ ಮಾಡಿದ ನಂತರ ತೀವ್ಆರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಹಾಗೆಯೇ ಈ ವೇಳೆ ಆಕೆಯ ಮಗಳಾದ ಸಾನಿಯಾಳ (20) ಬೆರಳನ್ನು ಕತ್ತರಿಸಿದ್ದಾನೆ ಹಾಗೂ ಇನ್ನೊಬ್ಬ ಸಂಬಂಧಿ ಅಕ್ಬರಿ (42) ತಲೆಗೆ ಬಲವಾದ ಹೊಡೆತ ಬಿದ್ದಿದೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಮಂಗಳವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಇಸ್ತೇಕರ್ ಟಿಫಿನ್ ಬಾಕ್ಸ್ನಲ್ಲಿ ಕತ್ತಿಯನ್ನು ಮುಚ್ಚಿಟ್ಟುಕೊಂಡು ಬಂದಿದ್ದಾನೆ. ಆ ಸಮಯದಲ್ಲಿ ಮಲಗಿದ್ದ ನುಸ್ರತ್ ಎಚ್ಚರಗೊಂಡು ಅವನಿಗೆ ಚಹ ನೀಡಲು ಬಂದಾಗ ಈತ ಆಯುಧವನ್ನು ತೆಗೆದುಕೊಂಡು ಆಕೆಯ ಕುತ್ತಿಗೆ, ಸೊಂಟ, ಬೆನ್ನಿನ ಮೇಲೆ ಪದೇ ಪದೇ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಮಗಳು ಮಧ್ಯಪ್ರವೇಶಿಸಲು ಬಂದಾಗ , ಆರೋಪಿ ಆಕೆಯ ಒಂದು ಬೆರಳನ್ನು ಕತ್ತರಿಸಿದ್ದಾನೆ. ಹಾಗೆಯೇ ನುಸ್ರತ್ ಅತ್ತಿಗೆ ಅಕ್ಬರಿ ಮೇಲೂ ಹಲ್ಲೆ ನಡೆಸಿ ತಲೆ ಮತ್ತು ಕುತ್ತಿಗೆಗೆ ಹೊಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಇಸ್ತೇಕರ್ ಅಹ್ಮದ್ನ್ನು ಕುಟುಂಬ ಸದಸ್ಯರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಅಪರಾಧದ ಹಿಂದಿನ ಉದ್ದೇಶವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಮೃತ ನುಸ್ರತ್ ಅವರ ಪತಿ ಪ್ರಸ್ತುತ ಜೈಲಿನಲ್ಲಿದ್ದಾರೆ. ಅವರು ತಮ್ಮ ಹೆಣ್ಣುಮಕ್ಕಳನ್ನು ಪೋಷಿಸುವ ಸಲುವಾಗಿ ಬೌನ್ಸರ್ ಆಗಿ ಕೆಲಸ ತೆಗೆದುಕೊಳ್ಳುವ ಮೊದಲು ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದರು. (ಏಜೆನ್ಸೀಸ್)