

ಸಿಡ್ನಿ: ಪ್ರಕೃತಿ ತನ್ನಲ್ಲಿ ನಿಗೂಢ ವಿಸ್ಮಯಗಳು, ವಿಚಿತ್ರ ಪ್ರಾಣಿಗಳನ್ನು ಅಡಗಿಸಿಕೊಂಡಿದೆ. ಅಂತಹ ಅಪರೂಪದ ಪ್ರಾಣಿಗಳು ಮನುಷ್ಯರ ಕಣ್ಣಿಗೆ ಆಗ್ಗಾಗ್ಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿಗೆ ಕಾರಣವಾಗುತ್ತವೆ. ಇಂತಹದ್ದೇ ಇಲ್ಲೊಂದು ವಿಸ್ಮಯಕಾರಿ ಜೀವಿ ಪತ್ತೆಯಾಗಿದೆ.
ಅನ್ಯಗ್ರಹ ಜೀವಿಗಳಂತೆ ಕಾಣುವ ವಿಚಿತ್ರ ಜೀವಿಯೊಂದು ಆಸ್ಟ್ರೇಲಿಯಾದ ಕಡಲತೀರದಲ್ಲಿ ಪತ್ತೆಯಾಗಿದೆ.
ಸಮುದ್ರ ತೀರದಲ್ಲಿ ಅಲೆಕ್ಸ್ ಟಾನ್ ಎಂಬ ವ್ಯಕ್ತಿ ಈ ವಿಚಿತ್ರ ಜೀವಿಯನ್ನು ಕಂಡು ತಮ್ಮ ಇನ್ಸ್ಟಾಗ್ರಾಂ ನಲ್ಲಿ ದೃಶ್ಯ ಹಂಚಿಕೊಂಡಿದ್ದಾರೆ. ಕೆಲವರು ಇದಕ್ಕೆ ಕಮೆಂಟ್ ಮಾಡಿದ್ದು, ಮತ್ತೆ ಕೆಲವರು ಅನ್ಯಗ್ರಹ ಜೀವಿಗಳು ಹೀಗಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ಕೆಲವರು ದೊಡ್ಡ ಗಾತ್ರದ ಇಲಿ ಇದಾಗಿರಬಹುದೇ ಎಂದು ಹೇಳಿಕೊಂಡಿದ್ದಾರೆ.