More

    ಕೇಬಲ್ ಕಾರ್​​ ಡಿಕ್ಕಿಯಾಗಿ ಇಬ್ಬರು ಸಾವು: ಹೆಲಿಕಾಪ್ಟರ್​ನಿಂದ ರಕ್ಷಣಾ ಕಾರ್ಯಾಚರಣೆ

    ರಾಂಚಿ: ಜಾರ್ಖಂಡ್​ನ್ ಡಿಯೋಘಡ​ ಜಿಲ್ಲೆಯ ಬೈದ್ಯನಾಥ್ ದೇವಾಲಯಕ್ಕೆ ಅಳವಡಿಸಿರುವ ಕೇಬಲ್​ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು,16 ಗಂಟೆಗಳಿಂದ ಸಿಲುಕಿಕೊಂಡಿರುವ 48 ಪ್ರವಾಸಿಗರನ್ನು ರಕ್ಷಿಸಲಾಗುತ್ತಿದೆ.

    ಬೆಟ್ಟದ ಮೇಲಿರುವ ದೇವಾಲಯಕ್ಕೆ ತಲುಪಲು ಕೇಬಲ್ ಕಾರು ಅಳವಡಿಸಲಾಗಿದೆ. ಇವು ಪರಸ್ಪರ ಡಿಕ್ಕಿ ಹೊಡೆದಿರುವುದರಿಂದ ಉಳಿದ ಕೇಬಲ್ ಕಾರುಗಳು ಅಲ್ಲೇ ಸಿಲುಕಿಕೊಂಡಿದ್ದು, ಹೆಲಿಕಾಪ್ಟರ್​ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕೂಡ ಸ್ಥಳಕ್ಕೆ ಧಾವಿಸಿದ್ದು, ಜನರನ್ನು ಸುರಕ್ಷಿತವಾಗಿ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದೆ. ತಾಂತ್ರಿಕ ದೋಷದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಡಿಯೋಘಡದ ಉಪ ಆಯುಕ್ತ ಮಂಜುನಾಥ್​ ಭಜಂತ್ರಿ ತಿಳಿಸಿದ್ದಾರೆ.

    ಕೆಲವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಒಟ್ಟು 48 ಕೇಬಲ್​ ಕಾರ್​ಗಳಿದ್ದು, ಅಲ್ಲೇ ಸಿಲುಕಿಕೊಂಡಿರುವ ಕಾರಣ ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಲಾಗುತ್ತಿದೆ.ಈ ಬಗ್ಗೆ ಗೊದ್ದಾ ಕ್ಷೇತ್ರದ ಸಂಸದ ನಿಶಿಕಾಂತ್ ದುಬೆ ಅವರು ಜಾರ್ಖಂಡ್​ ಮುಖ್ಯ ಕಾರ್ಯದರ್ಶಿ ಸುಖದೇವ್​ ಸಿಂಗ್​ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರಿಗೆ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts