

ಕಲಬುರಗಿ: ಮನೆಯ ಹಿಂಭಾಗದಲ್ಲಿರುವ ಶೌಚಗೃಹಕ್ಕೆ ಹೋಗಲು ನಿಂತಿದ್ದ ವಕ್ತಿಯೊಬ್ಬನ ಮೇಲೆ ಮರ ಬಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಗರ ಹೊರವಲಯದ ಸೆಂಟ್ರಲ್ ಜೈಲ್ ಸಿಬ್ಬಂದಿಯ ಕ್ವಾರ್ಟರ್ಸ್ನಲ್ಲಿ ಬುಧವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಕಲಬುರಗಿ ಕೇಂದ್ರ ಕಾರಾಗೃಹದ ಡಿ ಗ್ರೂಪ್ ಸಿಬ್ಬಂದಿ ಪಾರಿಬಾಯಿ ಅವರ ಪತಿ ಗೋವಿಂದ ಚವ್ಹಾಣ(42) ಮೃತರು.
ಮನೆಯ ಹಿಂಭಾಗದಲ್ಲಿ ಇರುವ ಶೌಚಗೃಹಕ್ಕೆ ಹೋಗಲು ಬೆಳಗ್ಗೆ ಬಕೆಟ್ಗೆ ನೀರು ಹಾಕಿಕೊಂಡು ಗೋವಿಂದ ಚವ್ಹಾಣ ನಿಂತಿದ್ದರು. ಆ ವೇಳೆ ಅಲ್ಲಿದ್ದ ಮರವೊಂದು ಉರುಳಿ ಮನೆ ಮೇಲೆ ಬಿತ್ತು. ಮಾಳಿಗೆ ಸೀಟ್ ಮುರಿದು ಮರದ ರೆಂಬೆಗಳು ಗೋವಿಂದರ ಮೇಲೆ ಅಪ್ಪಳಿಸಿದವು. ತೀವ್ರಗಾಯಗೊಂಡ ಅವರು ಸ್ಥಳದಲ್ಲೇ ಅಸುನೀಗಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಫರಹತಾಬಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿರಿ ಕ್ವಾರಂಟೈನ್ ಕೇಂದ್ರದಲ್ಲಿ ಕಾಂಡೋಮ್ ರಾಶಿ!