More

    ಕ್ವಾರಂಟೈನ್​ ಕೇಂದ್ರದಲ್ಲಿ ಕಾಂಡೋಮ್ ರಾಶಿ!

    ಬೆಂಗಳೂರು: ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ತಾಣವಾಗಬೇಕಿದ್ದ ಕ್ವಾರಂಟೈನ್​ ಕೇಂದ್ರಗಳು ಅವ್ಯವಸ್ಥೆಯ ಕೂಪವಾಗುತ್ತಿವೆ ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ ಇಲ್ಲಿದೆ. ಕ್ವಾರಂಟೈನ್ ಕುರಿತ ಬೆಚ್ಚಿಬೀಳಿಸೋ ಕರಾಳ ಕಥೆಯನ್ನು ಯುವಕನೊಬ್ಬ ಬಟಾಬಯಲು ಮಾಡಿದ್ದು, ಆರೋಗ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆಯೇ ಪ್ರಶ್ನೆ ಹುಟ್ಟು ಹಾಕಿದೆ. ಕ್ವಾರಂಟೈನ್ ಹೆಸರಲ್ಲಿ ಹಣದ ಸುಲಿಗೆ ನಡೀತಿದ್ಯಾ? ಎಂಬ ಅನುಮಾನಕ್ಕೂ ಎಡೆ ಮಾಡಿದೆ.

    ಎಲ್ಲೆಂದರಲ್ಲಿ ಕಾಂಡೋಮ್‌ಗಳ ರಾಶಿ, ಅನೈರ್ಮಲ್ಯತೆ, ದುರ್ವಾಸನೆ, ಸೊಳ್ಳೆ ಕಾಟ, ಶೌಚಗೃಹಕ್ಕೂ ನೀರಿಲ್ಲ, ಧೂಳು ಹಿಡಿದಿರೋ ಹಾಸಿಗೆ, ಟೀವಿ ಇದ್ರೂ ಕೇಬಲ್ ಇರಲ್ಲ, ಕರೆಂಟ್ ಇದ್ರೂ ಬಲ್ಬ್ ಹತ್ತಲ್ಲ… ಹಣ ಕಟ್ಟಿದ್ರೂ ಸೂಕ್ತ ಸೌಲಭ್ಯ ಸಿಗ್ತಿಲ್ಲ… ಅಬ್ಬಾ! ಒಂದಾ ಎರಡಾ ಕ್ವಾರಂಟೈನ್​ ಕೇಂದ್ರವಾಗಿರುವ ಬೆಂಗಳೂರಿನ ಹೋಟೆಲ್​ವೊಂದರಲ್ಲಿನ ದುರಾವಸ್ಥೆ.

    ಇದನ್ನೂ ಓದಿರಿ 300ರ ಗಡಿ ದಾಟಿತು ಬೆಂಗಳೂರು: 11 ಜಿಲ್ಲೆಗಳಲ್ಲಿ ಶತಕ ಮೀರಿದ ಕರೊನಾ ಸೋಂಕು!

    ಮೇ 26ರಂದು ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ಸ್ವತಃ ಅದೇ ಹೋಟೆಲ್​ನಲ್ಲಿರುವ ಯುವಕ, ಕ್ವಾರಂಟೈನ್​ ಕೇಂದ್ರದ ಕರಾಳತೆಯನ್ನು ತೆರೆದಿಟ್ಟಿದ್ದಾನೆ. ಬೇಡ ಅಂದ್ರೂ ದುಬಾರಿ ದರದ ಕ್ವಾರಂಟೈನ್​ ಕೇಂದ್ರಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಾರೆ. ಕಡಿಮೆ ಬೆಲೆಯ ಹೋಟೆಲ್​ಗೆ ಕರೆದೊಯ್ಯಿರಿ ಅಂದ್ರೂ ಕೇಳಲ್ಲ. ಅನಿವಾರ್ಯವಾಗಿ ಹಣ ಕಟ್ಟಿದ್ರೂ ಸೂಕ್ತ ಸೌಲಭ್ಯ ಸಿಗ್ತಿಲ್ಲ ಎಂಬ ಆರೋಪ ಕೆಲವೆಡೆ ದಟ್ಟವಾಗಿದೆ. ಇದಕ್ಕೆ ಪುಷ್ಠೀಕರಿಸುವಂತಿದೆ ಈ ಪ್ರಕರಣ.

    ಕ್ವಾರಂಟೈನ್‌ ಕೇಂದ್ರಗಳ ಅವ್ಯವಸ್ಥೆ ಬಗ್ಗೆ ಯುವಕನು ಸೆಲ್ಫಿ ವಿಡಿಯೋ ಮೂಲಕ ‘ದಿಗ್ವಿಜಯ’ ಸುದ್ದಿ ವಾಹಿನಿ ಬಳಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಅದರ ಡಿಟೇಲ್ಸ್​ ಇಲ್ಲಿದೆ ನೋಡಿ.

    ಇದನ್ನೂ ಓದಿರಿ ಅತೃಪ್ತರ ಸಭೆಯಲ್ಲಿ ಪಾಲ್ಗೊಂಡ ಶಾಸಕರ ಡಿಟೇಲ್ಸ್ ಇಲ್ಲಿದೆ ನೋಡಿ…

    ‘ಕ್ವಾರಂಟೈನ್​ ಕೇಂದ್ರಕ್ಕೆ ಬಸ್​ ಮೂಲಕ ಕರೆದೊಯ್ಯಲು ಪ್ರಯಾಣಿಕರಿಂದ ತಲಾ 300 ರೂ. ಶುಲ್ಕ ವಸೂಲಿ ಮಾಡಿದರು. ಬೇಡ ಅಂದ್ರೂ ದುಬಾರಿ ಬೆಲೆಯ ಹೋಟೆಲ್‌ಗೆ ಬಲವಂತವಾಗಿ ಶಿಫ್ಟ್ ಮಾಡುತ್ತಿದ್ದರು. ಇದಕ್ಕೆ ಆಗೋದೆ ಇಲ್ಲ ಎಂದಾಗ ಸರ್ಕಾರಿ ಕ್ವಾರಂಟೈನ್​ಗೆ ಹಾಕ್ತೀವಿ.. ಅಲ್ಲಿ ಪಾಸಿಟಿವ್​ ಇರೋರು ಇದ್ರೆ.. ಅಂತೆಲ್ಲ ಬೆದರಿಸಿದ್ರು. ಕಡಿಮೆ ಬೆಲೆಯ ಹೋಟೆಲ್‌ಗೆ ಕರೆದೊಯ್ಯಿರಿ ಅಂದ್ರೂ ಕೇಳಲಿಲ್ಲ. 7 ದಿನದ ಕ್ವಾರಂಟೈನ್‌ಗೆ ಮುಂಗಡವಾಗಿಯೇ ಹಣ ಕಟ್ಟಿಸಿಕೊಳ್ತಾರೆ. ಹಣ ಕಟ್ಟಿದ್ರೂ ಸೂಕ್ತ ಸೌಲಭ್ಯ ಸಿಗ್ತಿಲ್ಲ’ ಎಂದ ಯುವಕ ಅಲ್ಲಿನ ಕರಾಳತೆಯನ್ನು ವಿಡಿಯೋ ಮೂಲಕವೇ ತೋರಿಸಿದ್ದಾರೆ.

    ಇದನ್ನೂ ಓದಿರಿ ಬಿಜೆಪಿ ಸೇರಲು ಸಿದ್ಧವಾಗಿ ನಿಂತಿದ್ದಾರೆ ಕಾಂಗ್ರೆಸ್​ನ 20 ಶಾಸಕರು!

    ‘ಕ್ವಾರಂಟೈನ್ ಸೆಂಟರ್‌ಗಳಲ್ಲಿ ಸರಿಯಾಗಿ ಊಟ-ತಿಂಡಿ ಸಿಗ್ತಿಲ್ಲ. ಸಚ್ಛತೆಯಂತೂ ಕೇಳುವಂತಿಲ್ಲ. ಎಲ್ಲೆಂದರಲ್ಲಿ ಕಾಂಡೋಮ್​ಗಳು, ಮೂಲೆಯಲ್ಲಿ ಕಸದ ರಾಶಿ ಬಿದ್ದಿದ್ದರೂ ವಿಲೇವಾರಿ ಆಗಿಲ್ಲ. ಹಾಸಿಗೆ ಧೂಳು ಹಿಡಿದಿದ್ದು, ಗಬ್ಬುವಾಸನೆ ಬರುತ್ತಿದೆ. ಇನ್ನು ರೂಂನಲ್ಲಿ ನೆಪಕ್ಕೆ ಮಾತ್ರ ಟಿವಿ ಇದೆ. ಇದಕ್ಕೆ ಕೇಬಲ್​ ಕನೆಕ್ಷನ್​ ಇಲ್ಲ. ಇನ್ನು ಬಲ್ಬ್ ಕೂಡ ಹಾಳಾಗಿವೆ. ವಿದ್ಯುತ್​ ಸರಬರಾಜು ಕೂಡ ಸಮರ್ಪಕವಾಗಿಲ್ಲ. ಶೌಚಗೃಹ ಗಬ್ಬೆನ್ನುತ್ತಿದ್ದು, ಮೂರು ದಿನದಿಂದ ಸ್ನಾನ ಮಾಡಿಲ್ಲ. ಟಾಯ್ಲೆಟ್​ ಹೋಗಲು ನೀರು ಬರ್ತಿಲ್ಲ.. ಈಗಾಗಲೇ ಬಿಲ್​ ಕಟ್ಟಿಸಿಕೊಂಡಿದ್ದಾರೆ. ಸೌಲಭ್ಯದ ಬಗ್ಗೆ ಪ್ರಶ್ನಿಸಿದ್ರೆ ಮುಂಬೈಗೆ ವಾಪಸ್​ ಹೋಗಿ ಎಂದು ಬೆದರಿಸ್ತಾರೆ…’ ಎಂದು ಅಳಲು ತೋಡಿಕೊಂಡಿದ್ದಾರೆ.

    ಹೌದು, ಈ ವಿಡಿಯೋ ನೋಡಿದ್ರೆ ಕ್ವಾರಂಟೈನ್​ ಕೇಂದ್ರದಲ್ಲಿನ ನರಕ ಲೋಕ ಅನಾವರಣ ಗೊಳ್ಳುತ್ತದೆ. ಇಂಥ ಅವ್ಯವಸ್ಥೆಯಲ್ಲಿದ್ದರೆ ರೋಗ ಇಲ್ಲದವರಿಗೂ ರೋಗ ಬರೋದು ಪಕ್ಕಾ! ಇಲ್ಲಿ ಪ್ರಯಾಣಿಕರ ಹಣ ವ್ಯರ್ಥ. ಮಾನಸಿಕ ವ್ಯಥೆ ಹೆಚ್ಚುವ ಜತೆಗೆ ರೋಗದ ಭಯ ಆವರಿಸುತ್ತದೆ.

    ಕ್ವಾರಂಟೈನ್ ಕೇಂದ್ರದಲ್ಲಿ ಕೊಂಚ ಸಮಸ್ಯೆ ಇರೋದು ನಿಜ. ಶೇ.99ರಷ್ಟು ಸೌಲಭ್ಯ ನೀಡಲಾಗುತ್ತೆ. ಎಲ್ಲೆಲ್ಲಿ ಸಮಸ್ಯೆ ಇದೆ ಅನ್ನೋದನ್ನ ಪತ್ತೆ ಹಚ್ಚಿ ಬಗೆಹರಿಸಲಾಗುವುದು.
    | ಶ್ರೀರಾಮುಲು ಆರೋಗ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts