More

    300ರ ಗಡಿ ದಾಟಿತು ಬೆಂಗಳೂರು: 11 ಜಿಲ್ಲೆಗಳಲ್ಲಿ ಶತಕ ಮೀರಿದ ಕರೊನಾ ಸೋಂಕು!

    ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕರೊನಾ ಸೋಂಕು 248 ಹೊಸದಾಗಿ ಪತ್ತೆಯಾಗುವ ಮೂಲಕ, ಸೋಂಕಿತರ ಸಂಖ್ಯೆ 2781ಕ್ಕೆ ಏರಿದೆ. ಇವರ ಪೈಕಿ ಅಂತರರಾಜ್ಯ ಪ್ರಯಾಣಿಕರ ಸಂಖ್ಯೆ 227.

    ಈ ಪೈಕಿ 894 ಮಂದಿ ಬಿಡುಗಡೆಗೊಂಡಿದ್ದು, 1837 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 50 ವರ್ಷದ ಚಿಕ್ಕಬಳ್ಳಾಪುರದ ಮಹಿಳೆಗೆ ಕರೊನಾ ಸೋಂಕು ಪತ್ತೆಯಾಗಿದ್ದು ಅವರು ಇಂದು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕರೊನಾ ಸಾವಿನ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.

    ಇದನ್ನೂ ಓದಿ : ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಕುರ್ಚಿಗೆ ಕರ್ನಾಟಕ ಬರೆಯಲಿದೆಯೇ ಇತಿಹಾಸ?

    ಬೆಂಗಳೂರಿನಲ್ಲಿ 303 ಸೋಂಕಿತರು ಇಲ್ಲಿಯವರೆಗೆ ಪತ್ತೆಯಾಗಿದ್ದರೆ, ಮಂಡ್ಯದಲ್ಲಿ 257, ಕಲಬುರಗಿಯಲ್ಲಿ 251, ಯಾದಗಿರಿಯಲ್ಲಿ 223, ಉಡುಪಿಯಲ್ಲಿ 164, ದಾವಣಗೆರೆಯಲ್ಲಿ 146, ಬೆಳಗಾವಿಯಲ್ಲಿ 146, ಹಾಸನದಲ್ಲಿ 144, ಚಿಕ್ಕಬಳ್ಳಾಪುರದಲ್ಲಿ 136. ರಾಯಚೂರಿನಲ್ಲಿ 134, ಬೀದರ್​ನಲ್ಲಿ 120 ಸೋಂಕಿತರು ಇದುವರೆಗೆ ಪತ್ತೆಯಾಗುವ ಮೂಲಕ ಒಟ್ಟಾರೆ 11 ಜಿಲ್ಲೆಗಳಲ್ಲಿ ಸೋಂಕು ಶತಕ ಮೀರಿದೆ.

    ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ಸೋಂಕು ಪತ್ತೆಯಾದವರ ಪಟ್ಟಿ ಇಂತಿದೆ:
    ರಾಯಚೂರು 62, ಕಲಬುರ್ಗಿ 61, ಯಾದಗಿರಿ 60, ಉಡುಪಿ 15, ಬೆಂಗಳೂರು: 12; ದಾವಣಗೆರೆ 4, ಹಾಸನ 4, ಚಿಕ್ಕಬಳ್ಳಾಪುರ 5, ವಿಜಯಪುರ 4, ಮೈಸೂರು 2, ಬಳ್ಳಾರಿ 9, ತುಮಕೂರು 2, ಚಿಕ್ಕಮಗಳೂರು 2, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

    ಇದನ್ನೂ ಓದಿ  VIDEO: ರಾತ್ರೋರಾತ್ರಿ ಈ 76ರ ಅಜ್ಜಿ ರಾಕಿಂಗ್​ ಸ್ಟಾರ್​ ಆದದ್ದೇಕೆ?

    ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.
    ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

    ಸಂಪೂರ್ಣ ವಿವರ ಇಲ್ಲಿದೆ:

    300ರ ಗಡಿ ದಾಟಿತು ಬೆಂಗಳೂರು: 11 ಜಿಲ್ಲೆಗಳಲ್ಲಿ ಶತಕ ಮೀರಿದ ಕರೊನಾ ಸೋಂಕು! 300ರ ಗಡಿ ದಾಟಿತು ಬೆಂಗಳೂರು: 11 ಜಿಲ್ಲೆಗಳಲ್ಲಿ ಶತಕ ಮೀರಿದ ಕರೊನಾ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts