ಗಂಡ ಹೆಂಡಿರ ಜಗಳ ಬಿಡಿಸಲು ಹೋಗಿ ಕೊಲೆಯಾದ ಯುವಕ!

Acid Attack 28 Jan 20
Published on

ಲಕ್ನೋ; ಗಂಡ ಹೆಂಡಿರ ಜಗಳ ಬಿಡಿಸಲು ಹೋದ ಯುವಕನೊಬ್ಬ ಅನ್ಯಾಯವಾಗಿ ಗಂಡನಿಂದ ಹೊಡೆತ ತಿಂದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪ್ರೇಮನಗರದಲ್ಲಿ ಸೋಮವಾರ ನಡೆದಿದೆ.

ಮೃತ ವ್ಯಕ್ತಿಯನ್ನು ಅರ್ಜುನ್ (24) ಎಂದು ಗುರುತಿಸಲಾಗಿದೆ. ಕಿರಣ್ ಕುಮಾರ್ ಎನ್ನುವ ಕೊಲೆ ಆರೋಪಿ.

ಇತ್ತೀಚೆಗೆ ಕೆಲಸ ಕಳೆದುಕೊಂಡಿದ್ದ ಕಿರಣ್ ಕುಮಾರ್ ತನ್ನ ಹೆಂಡತಿ ದೀಪಮಾಲಾ ಜೊತೆಗೆ ಜಗಳವಾಡುತ್ತಿದ್ದ. ಅವರ ಜಗಳ ಬಿಡಿಸಲು ಅರ್ಜುನ್ ಮುಂದಾಗಿದ್ದ. ಈ ವೇಳೆ ಕಿರಣ್ ಕುಮಾರ್ ಅರ್ಜುನ್ ತಲೆಗೆ ಬಲವಾಗಿ ಹೊಡೆದಿದ್ದರಿಂದ ಅವನು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರೇಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net