ಚಿರಂಜೀವಿಯ ಬೆಂಬಲವಿದ್ರೂ MAA ಚುನಾವಣೆಯಲ್ಲಿ ಸೋಲುಂಡ ಪ್ರಕಾಶ್​ ರಾಜ್​! ಗೆದ್ದು ಬೀಗಿದ ಮಂಚು ವಿಷ್ಣು

prakash raj manchu vishnu
Published on

ಹೈದರಾಬಾದ್: 'ತೆಲುಗು ಮೂವೀಸ್​ ಆರ್ಟಿಸ್ಟ್ಸ್ ಅಸೋಸಿಯೇಷನ್' (MAA) ಚುನಾವಣೆಯಲ್ಲಿ ಹಿರಿಯ ನಟ ಪ್ರಕಾಶ್ ರಾಜ್​ಗೆ ಸೋಲಾಗಿದ್ದು, ನಟ ಹಾಗೂ ನಿರ್ಮಾಪಕ ಎಂ. ಮೋಹನ್​ಬಾಬು ಅವರ ಪುತ್ರ ಮಂಚು ವಿಷ್ಣು 400 ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಮೆಗಾಸ್ಟಾರ್​ ಚಿರಂಜೀವಿ ಅವರ ಬೆಂಬಲವಿದ್ದರೂ ಪ್ರಕಾಶ್​ ರಾಜ್ ಸೋಲು ಕಂಡಿದ್ದು, MAA ಅಧ್ಯಕ್ಷರಾಗಿ ಮಂಚು ವಿಷ್ಣು ಆಯ್ಕೆಯಾದರು.

MAA ಅಧ್ಯಕ್ಷ ಸ್ಥಾನಕ್ಕೆ ಭಾನುವಾರ(ಅ.10) ಸಂಜೆ ಹೈದರಾಬಾದ್​ನ ಜ್ಯುಬಿಲಿ ಹಿಲ್ಸ್ ಪಬ್ಲಿಕ್ ಶಾಲೆಯಲ್ಲಿ ಮತದಾನ ನಡೆದಿತ್ತು. ರಾತ್ರಿ 9ರ ವರೆಗೂ ಮತದಾನ ನಡೆದಿದ್ದು, ತಡರಾತ್ರಿವರೆಗೂ ಎಣಿಕೆ ನಡೆದು, ಬಳಿಕ ಫಲಿತಾಂಶ ಪ್ರಕಟಕೊಂಡಿದೆ. ತೆಲುಗು ಮೂವೀಸ್​ ಆರ್ಟಿಸ್ಟ್ಸ್ ಅಸೋಸಿಯೇಷನ್​ನಲ್ಲಿ 883 ಮಂದಿ ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ ನಿನ್ನೆ ನಡೆದ ಚುನಾವಣೆಯಲ್ಲಿ 605 ಮಂದಿ ಮತಕೇಂದ್ರಕ್ಕೆ ಬಂದು ಹಕ್ಕು ಚಲಾಯಿಸಿದ್ದರು. ಇನ್ನು 60 ಮಂದಿ ಅಂಚೆ ಮೂಲಕ ಮತ ಹಾಕಿದ್ದರು. ಒಟ್ಟು 665 ಮತಗಳು ಚಲಾವಣೆಯಾಗಿದ್ದವು. 381 ಮತಗಳನ್ನು ಪಡೆದ ಮಂಚು ವಿಷ್ಣು, 107 ಮತಗಳ ಅಂತರದಿಂದ ಪ್ರಕಾಶ್ ರಾಜ್​​ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಪ್ರಕಾಶ್ ರಾಜ್ ಪ್ಯಾನೆಲ್​ನಲ್ಲಿ ಎಂ. ಶ್ರೀಕಾಂತ್ ಮಾತ್ರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಷ್ಣು ಮಂಚು ನೇತೃತ್ವದ ತಂಡದ ಬಹುತೇಕ ಸದಸ್ಯರು MAA​ಗೆ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net