ಸೇತುವೆಗೆ ಡಿಕ್ಕಿಯಾಗಿ ನೇತಾಡಿದ ಲಾರಿ: ಮಹಿಳಾ ಡ್ರೈವರ್ ಬಚಾವಾಗಿದ್ದೇ ರೋಚಕ​, ವಿಡಿಯೋ ವೈರಲ್​

Lorry Hanging
Published on

ನ್ಯೂಯಾರ್ಕ್​: ನದಿಯಿಂದ ಸುಮಾರು 75 ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ನೇತಾಡಿದ ಲಾರಿಯೊಂದರಿಂದ ಚಾಲಕಿಯನ್ನು ರಕ್ಷಣೆ ಮಾಡಿದ ರೋಚಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಘಟನೆ ಅಮೆರಿಕದ ಕೆಂಟುಕಿಯಲ್ಲಿ ನಡೆದಿದೆ. ಸೇತುವೆ ಮೇಲೆ ಚಲಾಯಿಸುವಾಗ ನಿಯಂತ್ರಣ ಕಳೆದುಕೊಂಡ ಲಾರಿ, ತಡೆಗೋಡೆ ಡಿಕ್ಕಿ ಹೊಡೆದು ಇನ್ನೇನು ನದಿಗೆ ಬೀಳಬೇಕು ಎನ್ನುವಷ್ಟರಲ್ಲಿ ಹಿಂದಿನ ಕಂಟೈನರ್​ ಸೇತುವೆ ಸಿಲುಕಿ ನೇತಾಡಿತು.

ಸಂಪೂರ್ಣ ನೇತಾಡುತ್ತಿದ್ದ ಡ್ರೈವರ್​ ಕಂಪಾರ್ಟ್​ಮೆಂಟ್​ನಲ್ಲಿ ಸಿಲುಕಿದ್ದ ಚಾಲಕಿ ತಾನು ನದಿ ಬಿದ್ದು ಸಾಯುತ್ತೇನೆ ಎಂಬ ಭೀತಿಯಲ್ಲಿದ್ದಳು. ಆದರೆ, ಆಕೆಯ ಅದೃಷ್ಟ ಚೆನ್ನಾಗಿತ್ತು. ಸಕಾಲಕ್ಕೆ ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಕೂಡಲೇ ಕಾರ್ಯಾಚರಣೆಗೆ ಇಳಿದರು.

ಕೆಲವು ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ಹಗ್ಗ ಮತ್ತು ಏಣಿಗಳ ಸಹಾಯದಿಂದ ಚಾಲಕಿಯನ್ನು ಕಾಪಾಡಿದರು. ನೇತಾಡುತ್ತಿದ್ದ ಲಾರಿಯಲ್ಲಿ ಚಾಲಕಿ ಸುಮಾರು 45 ನಿಮಿಷಗಳ ಕಾಲ ಸಿಲುಕಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಾಲಕಿಯನ್ನು ರಕ್ಷಣೆ ಮಾಡಿದ ಬಳಿಕ ವಿವಿಧ ಯಂತ್ರಗಳ ಸಹಾಯದಿಂದ ಲಾರಿಯನ್ನು ಮೇಲಕ್ಕೆತ್ತಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೋಡುಗರ ಮೈ ಝುಮ್​ ಎನಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net