ಕೊಪ್ಪಳದಲ್ಲಿ ದುರಂತ: ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಒಂದೇ ಗ್ರಾಮದ ನಾಲ್ವರು ಮಹಿಳೆಯರು ಮಾರ್ಗದಲ್ಲೇ ಸಾವು

New Project(21)
Published on

ಕೊಪ್ಪಳ: ಕೆಲಸ ಮುಗಿಸಿ ರಾತ್ರಿ ಮನೆಗೆ ವಾಪಸ್​ ಆಗುತ್ತಿದ್ದ ಒಂದೇ ಗ್ರಾಮದ ನಾಲ್ವರು ಮಹಿಳೆಯರು ಮಾರ್ಗದಲ್ಲೇ ದುರಂತ ಅಂತ್ಯಕಂಡ ಘಟನೆ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದಲ್ಲಿ ನಡೆದಿದೆ.

ಭುವನೇಶ್ವರಿ(32), ಗೀರಿಜಾ(28), ರೇಖಾ(40) ಮತ್ತು ವೀಣಾ(22) ಕೊಚ್ಚಿಹೋದವರು. ಈ ನಾಲ್ವರು ಶನಿವಾರ ಬೆಳಗ್ಗೆ ಹತ್ತಿ ಜಿನ್ನಿಂಗ್​ನಲ್ಲಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿ ರಾತ್ರಿ ಗ್ರಾಮಕ್ಕೆ ವಾಪಸಾಗುವ ವೇಳೆ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು.

ಭಾನುವಾರ ಬೆಳಗ್ಗೆ ಮೂವರ ಮೃತದೇಹಗಳು ಪತ್ತೆಯಾಗಿತ್ತು. ಮಧ್ಯಾಹ್ನ ಮತ್ತೊಬ್ಬರ ಮೃತದೇಹ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net