ವಿಶ್ವ ಭೂಪಟದಲ್ಲಿ ದೇಶವೊಂದು ಅಸ್ತಿತ್ವದಲ್ಲಿರಲ್ಲ ಎಂದು ಮೊದಲೇ ಭವಿಷ್ಯ ನುಡಿದಿದ್ದೆ, ಅದು ನಿಜವಾಗ್ತಿದೆ: ಕೋಡಿಮಠ ಶ್ರೀಗಳು

Kodimath SWAMIJI
Published on

ಶಿವಮೊಗ್ಗ: ಜಗತ್ತಿನ ಭೂಪಟದಲ್ಲಿ ದೇಶವೊಂದು ಅಸ್ತಿತ್ವದಲ್ಲಿ ಇರಲ್ಲ ಎಂದು ಈ ಹಿಂದೆಯೇ ಭವಿಷ್ಯ ನುಡಿದಿದ್ದೆ. ಈಗ ಆಫ್ಘಾನಿಸ್ತಾನ ತಾಲಿಬಾನಿಗಳ ಕೈಗೆ ಸಿಲುಕಿ ನಲುಗುತ್ತಿದೆ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.

ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಮಾತನಾಡಿದ ಕೋಡಿಮಠ ಶ್ರೀಗಳು, ಸಿಎಂ ಬಸವರಾಜ ಬೊಮ್ಮಾಯಿ ಅವರು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಯಾವುದೇ ವಿವಾದ ಸೃಷ್ಟಿಸಿಕೊಳ್ಳದೆ ರಾಜ್ಯವನ್ನು ಮುನ್ನೆಡಸಲಿದ್ದಾರೆ. ಮುಂದಿನ ಐದು ವರ್ಷದವರೆಗೂ ಕರೊನಾ ಸೋಂಕು ಸಂಪೂರ್ಣ ನಾಶ ಆಗಲ್ಲ. ಕರೊನಾ ಬಗ್ಗೆ ಭಯ ಬೇಡ, ಮಕ್ಕಳ ಬಗ್ಗೆ ಆತಂಕ ಪಡಬೇಡಿ. ಸ್ವಚ್ಛತೆಯತ್ತ ಗಮನ ಹರಿಸಿ ಮುಂಜಾಗ್ರತೆ ವಹಿಸಿ ಎಂದರು.

ಈ ಬಾರಿ ಕುಂಭ ರಾಶಿಯಲ್ಲಿ ಗುರು ಪ್ರವೇಶ ಮಾಡಿದ್ದರಿಂದ ಮಳೆ ಜಾಸ್ತಿಯಾಗಿದೆ. ನೆರೆ ಮತ್ತಿತರೆ ಅವಘಡಗಳಿಂದ ಜನತೆ ತತ್ತರಿಸಲಿದ್ದಾರೆ ಎಂದು ಕೋಡಿಮಠ ಶ್ರೀಗಳು ಭವಿಷ್ಯ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net