More

    ಅವ್ರು ದೊಡ್ಡವ್ರು ಬೇಡವ್ವ.. ಅಂದ್ರೂ ಮದ್ವೆ ಆಗ್ತೀನಂತ ಹಠ ಹಿಡಿದು ಅವನೊಂದಿಗೇ ಬಾರದ ಲೋಕಕ್ಕೆ ಹೋಗಿಬಿಟ್ಲು…

    ಬೆಂಗಳೂರು: ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಸೋಮವಾರ ತಡರಾತ್ರಿ 1.30ರ ಸುಮಾರಿಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ತಮಿಳುನಾಡು ಡಿಎಂಕೆ ಶಾಸಕ ವೈ. ಪ್ರಕಾಶ್​ರ ಏಕೈಕ ಪುತ್ರ ಕರುಣಾಸಾಗರ್​ ಸೇರಿ 7 ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಕರುಣಾಸಾಗರ್​ನ ಭಾವಿ ಪತ್ನಿ ಬಿಂದು ಕೂಡ ಈ ಅಪಘಾತದಲ್ಲಿ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ‘ನನ್ನ ಮಗಳು ಶಾಸಕರ ಪುತ್ರ ಕರುಣಾಸಾಗರ್​ನನ್ನು ಮದುವೆ ಆಗುತ್ತೇನೆ ಎಂದು ಹಠ ಮಾಡಿದ್ದಳು. ಅವರು ದೊಡ್ಡವರು ಬೇಡ ಎಂದು ಮಗಳಿದೆ ಬುದ್ಧಿ ಹೇಳಿದ್ದೆ. ಏನೇ ಆದರೂ ಅವರನ್ನೇ ಮದುವೆ ಆಗುವೆ ಎಂದು ಹೇಳಿದ್ದ ಮಗಳೀಗ ಅವರೊಂದಿಗೇ ಬಾರದ ಲೋಕಕ್ಕೆ ಹೋಗಿಬಿಟ್ಟಳು… ನಿನ್ನೆ ನಾನು ಮಗಳಿಗೆ ಕಾಲ್​ ಮಾಡಿದ್ದಾಗ ಚೆನ್ನೈನಲ್ಲಿ ಇದ್ದೇನೆ ಅಂದಿದ್ದಳು. ಬೆಳಗ್ಗೆ ಟಿವಿಯಲ್ಲಿ ಸುದ್ದಿ ನೋಡಿದಾಗಲೇ ಗೊತ್ತಾಗಿದ್ದು ಮಗಳು ಇನ್ನಿಲ್ಲ ಎಂದು…’ ಎಂದು ಬಿಂದು ತಂದೆ ಚಂದ್ರಶೇಖರ್ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತದ್ದು.

    ಅವ್ರು ದೊಡ್ಡವ್ರು ಬೇಡವ್ವ.. ಅಂದ್ರೂ ಮದ್ವೆ ಆಗ್ತೀನಂತ ಹಠ ಹಿಡಿದು ಅವನೊಂದಿಗೇ ಬಾರದ ಲೋಕಕ್ಕೆ ಹೋಗಿಬಿಟ್ಲು...
    ಕರುಣಾಸಾಗರ್​ನ ಕಾರು ಅಪಘಾತಕ್ಕೀಡಾಗಿರುವುದು.

    ‘ಬಿಂದು ಎಂಎಸ್ಸಿ ಓದಿದ್ದು, ಚೆನೈನಲ್ಲಿ ಜಾಬ್ ಮಾಡ್ತಿದ್ದಳು. ಕೋವಿಡ್ ಕಾರಣ ವರ್ಕ್ ಫ್ರಂ ಹೋಂನಲ್ಲಿ ಇದ್ದಳು. ಬೆಂಗಳೂರಿನಲ್ಲಿ ಇದ್ರೂ ನಮ್ಮ ಜತೆ ಇರಲಿಲ್ಲ. ಕೆಲಸಕ್ಕೆ ಅಡ್ಡಿ ಆಗುತ್ತೆ ಅಂತ ಪಿಜಿಯಲ್ಲಿ ಇದ್ದಳು. ಕರುಣಾಸಾಗರ್​ ನಮಗೆ ಭಾವನ ಮಗ ಆಗಬೇಕು. ಅವರಿಬ್ಬರೂ ಮದುವೆ ಆಗಬೇಕು ಅಂತಿದ್ರು. ಮದುವೆ ಆದ್ರೆ ಕರುಣಾಸಾಗರ್​ನನ್ನೇ ಆಗ್ತೀನಿ ಅಂತ ಹಠ ಹಿಡಿದಿದ್ದಳು. ದೊಡ್ಡವರ ಸಹವಾಸ ಬೇಡ ಅಂತ ನಾವು ಕಿವಿಮಾತು ಹೇಳಿದ್ವಿ ಆದ್ರೆ ಕೇಳಿರಲಿಲ್ಲ. ಇವತ್ತು ಹೀಗಾಗಿದೆ…’ ಇದೆಲ್ಲಾ ನಮ್ಮ ಹಣೆಬಹರ ಎಂದು ಮೃತಳ ತಂದೆ ಕಣ್ಣೀರಿಟ್ಟರು.

    ಕರುಣಾಸಾಗರ್​ ಮತ್ತು ಉತ್ಸವ್​ ಇಬ್ಬರೂ ತಮಿಳುನಾಡಿನಿಂದ ಆಡಿ ಕ್ಯೂ 3 ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದರು. ಇಷಿಕಾ ಬಿಸ್ವಾಸ್​, ಡಾ.ಧನುಷಾ, ಬಿಂದು, ಕಾರ್ತಿಕ್​ ಮತ್ತು ಅಕ್ಷಯ್​ ಗೋಯಲ್​ ಈ ಐವರೂ ಬೆಂಗಳೂರಿನ ಜೋಲಾ ಸರ್ವಿಸ್​ ಅಪಾರ್ಟ್​ಮೆಂಟ್​ನಲ್ಲಿನ ಪಿಜಿಯಲ್ಲಿ ವಾಸವಿದ್ದರು. ಬಿಂದುನನ್ನು ಭೇಟಿ ಆಗಲು ಬಂದ ಕರುಣಾಸಾಗರ್​, ಈ ಐವರನ್ನೂ ಕಾರಿನಲ್ಲಿ ಊಟಕ್ಕೆ ಕರೆದೊಯ್ದಿದ್ದರು. ಊಟ ಮುಗಿಸಿ ವಾಪಸ್​ ಸ್ನೇಹಿತರನ್ನು ಅಪಾರ್ಟ್​ಮೆಂಟ್​ ಬಳಿ ಬಿಡಲು ಬರುತ್ತಿರುವಾಗ ನಿಯಂತ್ರಣ ತಪ್ಪಿದ ಕಾರು ಫುಟ್​ಪಾತ್ ಮೇಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 7 ಮಂದಿಯೂ ದುರಂತ ಅಂತ್ಯ ಕಂಡಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ಕರುಣಾಸಾಗರ್​ ಹಾಗೂ ಬಿಂದು ಇಬ್ಬರಿಗೂ ಸದ್ಯದಲ್ಲೇ ಮದುವೆ ಮಾಡಲು ಕರುಣಾಸಾಗರ್ ಕುಟುಂಬ ನಿರ್ಧರಿಸಿತ್ತು. ಅಷ್ಟರಲ್ಲಿ ಅಟ್ಟಹಾಸ ಮೆರೆದ ಜವರಾಯ , ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದ್ದಾನೆ.

    ಮೃತ ನಿಶಿತಾ ಬಿಸ್ವಾಸ್ ಎಂಬಾಕೆ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಡಾ. ಧನುಷಾ ಅವರು ದಂತ ವೈದ್ಯೆಯಾಗಿದ್ದರು.

    ಮೈಸೂರಲ್ಲಿ ಗ್ಯಾಂಗ್​ ರೇಪ್​: ನಮ್ಮಲ್ಲೊಬ್ಬನಿಗೆ ಲೈಂಗಿಕ ಚಟವಿತ್ತು… ಬೆಚ್ಚಿಬೀಳಿಸುತ್ತೆ ಆರೋಪಿಗಳ ಮಾತು

    ಟೇಕ್​ ಕೇರ್​​ ಅಂದ್ರೂ ಡೋಂಟ್​ ಕೇರ್: ಅಪಘಾತಕ್ಕೂ ಮುನ್ನ ಇವರ ಮಾತು ಕೇಳಿದ್ರೆ ಬದುಕುಳಿತಿದ್ದ MLA ಪುತ್ರ?!

    ಅತ್ಯಾಚಾರ ಆರೋಪಿ ಅನುಮಾನಾಸ್ಪದ ಸಾವು: ಪಿಎಸ್​ಐ ಸೇರಿ ಐವರು ಪೊಲೀಸರ ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts