ಕೆರೆಗೆ ಹಾರಿ ಪ್ರಾಣಬಿಟ್ಟ ಅಕ್ಕ-ತಂಗಿ: ಬಾಳಿ ಬದುಕಬೇಕಿದ್ದವರು ಸಾವಿನ ಮನೆಯ ಕದ ತಟ್ಟಿದ್ದೇಕೆ?

New Project (17)
Published on

ಕೊಡಗು: ಸಹೋದರಿಯರಿಬ್ಬರು ಕೆರೆಗೆ ಹಾರಿ ಪ್ರಾಣ ಬಿಟ್ಟ ದುರ್ಘಟನೆ ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯಬಿ.ಶೆಟ್ಟಿಗೇರಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.

ನಾಮೇರ ಉದಯ ಎಂಬುವರ ಪುತ್ರಿಯರಾದ ದಮಯಂತಿ(20) ಮತ್ತು ಹರ್ಷಿತಾ(18) ಮೃತ ಅಕ್ಕ-ತಂಗಿ. ಹಳ್ಳಿಗಟ್ಟು ಸಿಇಟಿ ಕಾಲೇಜಿನಲ್ಲಿ ಅಕ್ಕ ದಮಯಂತಿ ಇಂಜಿನಿಯರಿಂಗ್ ಓದುತ್ತಿದ್ದಳು. ಕಾವೇರಿ ಕಾಲೇಜಿನಲ್ಲಿ ಹರ್ಷಿತಾ ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದಳು.

ಅಕ್ಕ-ತಂಗಿ ಇಬ್ಬರು ಕೆರೆಗೆ ಹಾರಿ ಪ್ರಾಣಬಿಟ್ಟಿದ್ದು ಯಾಕೆ? ಸಾವಿನ ಮನೆಗೆ ಒಟ್ಟಿಗೆ ಇಬ್ಬರೂ ಹೋಗಿದ್ದೇಕೆ? ಎಂಬುದಕ್ಕೆ ಸೂಕ್ತ ಕಾರಣ ಇನ್ನೂ ಲಭ್ಯವಾಗಿಲ್ಲ. ಆದರೆ, ಕೌಟುಂಬಿಕ ಕಲಹ ಹಿನ್ನೆಲೆ ಬೇಸತ್ತು ಅಕ್ಕ-ತಂಗಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net