

ನವದೆಹಲಿ: ಸುಪ್ರೀಂಕೋರ್ಟ್ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು. ಲಲಿತ್ ರಾಷ್ಟ್ರಪತಿ ಭವನದಲ್ಲಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.
ಉದಯ್ ಉಮೇಶ್ ಲಲಿತ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು. ಯುಯು ಲಲಿತ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ 74 ದಿನ ಕಾರ್ಯ ನಿರ್ವಹಿಸಲಿದ್ದಾರೆ.
ಜಸ್ಟಿಸ್ ಎನ್.ವಿ.ರಮಣ ಅವರು ಶುಕ್ರವಾರ ನಿವೃತ್ತರಾಗಿದ್ದು, ಈ ಸ್ಥಾನವನ್ನು ಯು.ಯು. ಲಲಿತ್ ಅಲಂಕರಿಸಿದ್ದಾರೆ.
ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಮಾತನಾಡಿದ್ದ ಜಸ್ಟೀಸ್ ಲಲಿತ್, ಅಧಿಕಾರಾಧಿ 74 ದಿನಗಳಿದ್ದು, ಈ ಸೀಮಿತ ಕಾಲದಲ್ಲಿ ಸಾಧ್ಯವಾಗುಷ್ಟು ಸುಧಾರಣೆಯನ್ನು ನ್ಯಾಯಾಂಗದಲ್ಲಿ ತರಲು ಪ್ರಯತ್ನಿಸುವೆ. ಪ್ರಕರಣಗಳ ಸಮರ್ಪಕ ವಿಚಾರಣೆ, ನಿಷ್ಪಕ್ಷಪಾತ ನ್ಯಾಯದಾನ ಕೋರ್ಟ್ನ ಆದ್ಯ ಕರ್ತವ್ಯ. ಪ್ರಕರಣಗಳ ತ್ವರಿತ ವಿಲೇವಾರಿಯೂ ಆಗಬೇಕು. ಆದ್ದರಿಂದ ಉನ್ನತ ಕೋರ್ಟ್ಗಳಲ್ಲಿ ವಿಚಾರಣೆಗೆ ಬರುವ ಪ್ರಕರಣ ಪಟ್ಟಿ ಮತ್ತು ತುರ್ತು ಅರ್ಜಿಗಳ ವಿಚಾರಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಆದ್ಯತೆ ನೀಡಲಾಗುವುದು ಎಂದಿದ್ದರು.