ಹೈಕೋರ್ಟ್​ನ ಮೂರೂ ಪೀಠಗಳಿಗೆ ಆ.29ರಂದು ರಜೆ

Highcourt
Published on

ಬೆಂಗಳೂರು: ಹೈಕೋರ್ಟ್​ನ ಬೆಂಗಳೂರು ಪ್ರಧಾನ ಪೀಠ ಹಾಗೂ ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ಆ.29ರಂದು ರಜೆ ಘೋಷಿಸಲಾಗಿದೆ.

ಹೈಕೋರ್ಟ್​ ಪ್ರಭಾರಿ ರಿಜಿಸ್ಟ್ರಾರ್​ ಜನರಲ್​ ಬಿ. ಮುರಳೀದರ ಪೈ ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಆ.29ರ ರಜೆಯ ಬದಲಿಗೆ ಅ.15ರಂದು ಕೆಲಸದ ದಿನ ಎಂದು ಘೋಷಿಸಲಾಗಿದ್ದು, ಅಂದು ಮೂರೂ ಪೀಠಗಳಲ್ಲಿ ಕಲಾಪ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net