

ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ (ಎಸ್ಎನ್ಜೆಪಿ) ಶಿಫಾರಸುಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಅನುಮೋದನೆ ನೀಡಿದೆ. ಅದರ ಅನುಷ್ಠಾನದಿಂದ ದೇಶದ ಸುಮಾರು 25,000 ನ್ಯಾಯಮೂರ್ತಿಗಳು ಹಾಗೂ ನ್ಯಾಯಾಧೀಶರ ಮೂಲ ವೇತನ ಮೂರು ಪಟ್ಟು ಹೆಚ್ಚಲಿದೆ. ಎಸ್ಎನ್ಜೆಪಿ ಶಿಫಾರಿತ ವೇತನವನ್ನು 2016ರ ಜನವರಿ 1ರಿಂದಲೇ ಪೂರ್ವಾನ್ವಯಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ.ರಮಣ ಸೂಚಿಸಿದ್ದಾರೆ.