ತಲೈವಾ ನಟಿಸಲಿರುವ 170ನೇ ಚಿತ್ರದ ಬಗ್ಗೆ ಹೊರಬಿತ್ತು ಕುತೂಹಲಕಾರಿ ಸುದ್ದಿ!

Untitled design - 2023-08-07T101929.488
Published on

ತಮಿಳುನಾಡು: ಕಾಲಿವುಡ್​ನ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ಅಭಿನಯಿಸಲಿರುವ ಮುಂದಿನ 170ನೇ ಚಿತ್ರದ ಬಗ್ಗೆ ಇದೀಗ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ.

ತಲೈವಾ ನಟನೆಯ ಬಹುನಿರೀಕ್ಷಿತ 'ಜೈಲರ್' ಚಿತ್ರ ಇದೇ ಆಗಸ್ಟ್ 10 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗುತ್ತಿದೆ. ಈ ಮಧ್ಯೆ, ರಜನಿಕಾಂತ್ ಅವರ ಮುಂದಿನ ಚಿತ್ರದ ಬಗ್ಗೆ ಇದೀಗ ಹೊಸ ವದಂತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಮಾಹಿತಿಯ ಪ್ರಕಾರ, 'ಜೈ ಭೀಮ್' ಸಿನಿಮಾದ ಖ್ಯಾತಿಯ ಟಿ.ಜೆ. ಜ್ಞಾನವೇಲ್ ನಿರ್ದೇಶಿಸಲಿರುವ 170ನೇ ಚಿತ್ರಕ್ಕಾಗಿ ರಜನಿಕಾಂತ್​ 50 ದಿನಗಳ ಕಾಲ್ ಶೀಟ್ ನೀಡಿದ್ದಾರೆ ಎನ್ನಲಾಗಿದೆ.

ಈ ಚಿತ್ರದ ಚಿತ್ರೀಕರಣವು ಅಕ್ಟೋಬರ್ 2023 ರಲ್ಲಿ ಪ್ರಾರಂಭವಾಗಲಿದ್ದು, ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಫಹದ್ ಫಾಸಿಲ್, ನಾನಿ ಮತ್ತು ಮಂಜು ವಾರಿಯರ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳಿವೆ! ಸದ್ಯ ಈ ಬಗ್ಗೆ ಚಿತ್ರ ತಯಾರಕರಿಂದ ಯಾವುದೇ ಅಧಿಕೃತ ಮಾಹಿತಿಯೂ ಹೊರಬಂದಿಲ್ಲ.

ಇತ್ತೀಚೆಗಷ್ಟೇ ಚಿತ್ರದಲ್ಲಿ ರಜನಿಕಾಂತ್​ ಅವರ ಹೊಸ ಲುಕ್​ವೊಂದು ರಿಲೀಸ್​ ಆಗಿದ್ದು, ಇದು ತಲೈವಾ ಅಭಿಮಾನಿಗಳಿಗೆ ಭಾರೀ ಸಂತಸ ತಂದಿದೆ. ಚಿತ್ರಕ್ಕೆ ತಾತ್ಕಾಲಿಕವಾಗಿ 'ತಲೈವರ್ 170' ಎಂಬ ಟೈಟಲ್​ ಇಡಲಾಗಿದ್ದು, ಲೈಕಾ ಪ್ರೊಡಕ್ಷನ್​ ಸಂಸ್ಥೆ ನಿರ್ಮಾಣದ ಜವಾಬ್ದಾರಿ ಹೊರಲಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net