ಕಾಂಗ್ರೆಸ್​ನವರು ನನ್ನನ್ನೇ ರೇಪ್​ ಮಾಡಕ್ಕೆ ಯತ್ನಿಸುತ್ತಿದ್ದಾರೆ: ಗೃಹ ಸಚಿವ ಜ್ಞಾನೇಂದ್ರ

Araga Gnandra (1) (1)
Published on

ಬೆಂಗಳೂರು: ಕಾಂಗ್ರೆಸ್​ನವರು ನನ್ನನ್ನೇ‌ ರೇಪ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಮಾಧ್ಯಮಗಳ ಬಳಿ ಬೇಜವಾಬ್ದಾರಿ ಹೇಳಿಕೆ ಕೊಟ್ಟ ಗೃಹ ಸಚಿವರು, ಯುವತಿ ಮೇಲೆ ಅತ್ಯಾಚಾರ ಆಗಿರೋದು ಮೈಸೂರಿನಲ್ಲಿ. ಆದರೆ, ಕಾಂಗ್ರೆಸ್​ನವರು ನನ್ನನ್ನೇ‌ ರೇಪ್ ಮಾಡಕ್ಕೆ ಯತ್ನಿಸುತ್ತಿದ್ದಾರೆ ಎಂದರು. ಕಾಂಗ್ರೆಸ್​ನಿಂದ ಗೃಹ ಸಚಿವರ ರಾಜೀನಾಮೆ ಒತ್ತಾಯ ವಿಚಾರ ಸಂಬಂಧ ಪ್ರತಿಕ್ರಿಯಿಸದ ಸಚಿವರು, ಕಾಂಗ್ರೆಸ್​ನವರು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದರು.

ಯಾವ ಸರ್ಕಾರವೇ ಇರಲಿ ಇಂತಹ ಘಟನೆ ನಡೆದಾಗ ಗೃಹ ಸಚಿವರನ್ನೇ ಪ್ರಶ್ನಿಸೋದು. ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ಪ್ರತಿಕ್ರಿಯಿಸಬೇಕಿದ್ದ, ಗೃಹ ಸಚಿವರು ತಮ್ಮ ಜವಾಬ್ದಾರಿ ಮರೆತವರಂತೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇದಿಷ್ಟೇ ಅಲ್ಲ, 'ಸಂತ್ರಸ್ತ ಯುವತಿ ನಿರ್ಜನ‌‌ ಪ್ರದೇಶಕ್ಕೆ ಹೋಗಬಾರದಿತ್ತು...' ಎನ್ನುವ ಮೂಲಕ ಮಹಿಳೆಯರು ಸೇರಿದಂತೆ ವಿವಿಧ ಸಂಘಟನೆಗಳ ಕೆಂಗಣ್ಣಿಗೆ ಗೃಹ ಸಚಿವರು ಗುರಿಯಾಗಿದ್ದಾರೆ.

ಆರಗ ಜ್ಣಾನೇಂದ್ರರ ಈ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇಂತಹ ಹೇಳಿಕೆ ಕೊಟ್ಟ ಇವರು ಯಾವ ಗೃಹ ಸಚಿವರು? ಕಾಂಗ್ರೆಸ್​ನವರು ನಿಮ್ಮ ಮೇಲೆ ರೇಪ್ ಮಾಡಿದ್ದೇವಾ? ಜ್ಞಾನ ಇದೆಯಲ್ಲಾ ತಮಗೆ ಮಾತಾಡಬೇಕಾದ್ರೆ... ಮಹಿಳೆಯರಿಗೆ ಪ್ರೊಟೆಕ್ಷನ್ ಕೊಡೋದು ಬಿಟ್ಟು ಬಾಯಿಗೆ ಬಂದಂತೆ ಮಾತಾಡೋದಾ? ಮಹಿಳೆಯರ ಮೇಲೆ ಅನ್ಯಾಯ, ಅತ್ಯಾಚಾರ ಆದಾಗ ಖಂಡಿಸಿದೋದು ನಮ್ಮ ಕೆಲಸ. ನಿಮ್ಮ ಬಳಿ ವಿರೋಧ ಪಕ್ಷವಾಗಿ ನಾವು ಹೇಳುವುದು ನಮ್ಮ ಕರ್ತವ್ಯ ಎಂದು ಯಾದಗಿರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಗೂಳಿ ಅವರು ಗೃಹ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net