ತರಬೇತಿ ನಿರತ ವೈದ್ಯೆಗೆ ಲಿಫ್ಟ್​ನಲ್ಲೇ ಮುತ್ತು ಕೊಟ್ಟ ಪ್ರಕರಣ: ಹಿಮ್ಸ್​ ಆಸ್ಪತ್ರೆ ವೈದ್ಯ ಡಾ.ಲೋಕೇಶ್​ ಅಮಾನತು

hims hospital dr lokesh
Published on

ಹಾಸನ: ತರಬೇತಿ ನಿರತ ವೈದ್ಯೆಗೆ ಲಿಫ್ಟ್​ನಲ್ಲಿ ಬಲವಂತವಾಗಿ ಮುತ್ತುಕೊಟ್ಟು ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಹಿಮ್ಸ್ ಆಸ್ಪತ್ರೆಯ ವೈದ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಪಕ ಡಾ. ಲೋಕೇಶ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಡಾ.ಲೋಕೇಶ್ ಅವರನ್ನ ಅಮಾನತು ಮಾಡಲಾಗಿದೆ.

ಜ.12ರಂದು ಲಿಫ್ಟ್​ನಲ್ಲಿ ತೆರಳುತ್ತಿದ್ದ ತರಬೇತಿ ನಿರತ ವೈದ್ಯೆಗೆ ಡಾ.ಲೋಕೇಶ್​ ಏಕಾಏಕಿ ಮುತ್ತು ಕೊಟ್ಟಿದ್ದಾಗಿ ಸಂತ್ರಸ್ತೆಯು ಹಾಸನ‌ ವೈದ್ಯಕೀಯ ಸಂಸ್ಥೆಗೆ ಜ.14ರಂದು ದೂರು ನೀಡಿದ್ದರು. ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಿ ಮೂರು ವಾರದೊಳಗೆ ವರದಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ. ಈ ಆರೋಪವನ್ನು ತಳ್ಳಿ ಹಾಕಿರುವ ವೈದ್ಯ ಡಾ.ಲೋಕೇಶ್​, ತನಿಖೆ ನಡೆಯುತ್ತಿದೆ. ನಾನು ನಿರಪರಾಧಿ ಅಂತ ಸಾಬೀತಾಗುತ್ತೆ. ನಾನು ಬೈದೆ ಅಂತ ಎಚ್​ಒಡಿ ಜತೆ ಸೇರಿ ಇಲ್ಲಸಲ್ಲದ ಕತೆ ಕಟ್ಟಿದಾರೆ ಎಂದು ವಿಜಯವಾಣಿಗೆ ಪ್ರತಿಕ್ರಿಯಿಸಿದರು.

ಈ ಪ್ರಕರಣದ ತನಿಖಾಧಿಕಾರಿಯೂ ಆದ ಅಪರ ಜಿಲ್ಲಾಧಿಕಾರಿ ಕವಿತಾರಾಜಾರಾಂ ಮಾತನಾಡಿ, ಪಿಜಿ ನರ್ಸಿಂಗ್ ವೈದ್ಯೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಡಾ.ಲೋಕೇಶ್ ಎಂಬುವವರ ವಿರುದ್ಧ ದೂರು ಬಂದಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅವರು ಲೋಕೇಶ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಆಂತರಿಕ ದೂರು ಮಹಿಳಾ ಸಮಿತಿಯಲ್ಲೂ ತನಿಖೆ ನಡೆಯುತ್ತೆ. ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದ್ದಾರೆ. ಮೂರು ವಾರದೊಳಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದಾರೆ. ತನಿಖೆ ನಡೆಸಿ ವರದಿ ಸಲ್ಲಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net