ಒಲ್ಲೆ ಎಂದರೂ ಅಣ್ಣನ ಎದುರೇ 'ಬಾ.. ಮೊದಲಿನಂತೆ ನನ್ನ ಜತೆಗಿರು ಬಾ..' ಎಂದು ಸೋದರಿಯನ್ನ ಪೀಡಿಸುತ್ತಿದ್ದ... ನಡೆದೇ ಹೋಯ್ತು ಘೋರ ಕೃತ್ಯ

murder case
Published on

ಚನ್ನಪಟ್ಟಣ: ತೃತೀಯ ಲಿಂಗಿ ಸಹೋದರಿಯನ್ನು ಪೀಡಿಸುತ್ತಿದ್ದ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸಹೋದರ, ಒಬ್ಬನನ್ನು ಕೊಂದಿದ್ದು, ಮತ್ತೊಬ್ಬನ ಸ್ಥಿತಿ ಗಂಭಿರವಾಗಿದೆ.

ಇಂತಹ ಘಟನರ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಲಾಳಘಟ್ಟ ಗ್ರಾಮದಲ್ಲಿ ಸೋಮವಾರ ನಡೆದಿದೆ. ಆನಂದ್​(35) ಮೃತ. ರಾಘವೇಂದ್ರ(33) ಗಾಯಾಳು. ಇಬ್ಬರೂ ಮಂಡ್ಯ ಮೂಲದವರಾಗಿದ್ದು, ತೃತೀಯ ಲಿಂಗಿ ಸಹೋದರ ದರ ಗುರು(30) ಆರೋಪಿ. ಗಾಯಾಳು ರಾಘವೇಂದ್ರ ಮಂಡ್ಯದಲ್ಲಿ ರೌಡಿಶೀಟರ್​.

ಚನ್ನಪಟ್ಟಣದ ಮೋಳೆದೊಡ್ಡಿ ಗ್ರಾಮದ ಮೌನ ಅಲಿಯಾಸ್​ ಮನು ತೃತೀಯ ಲಿಂಗಿಯಾಗಿದ್ದು, ಕಳೆದ 8 ವರ್ಷಗಳಿಂದ ಮಂಡ್ಯದಲ್ಲಿ ವಾಸವಾಗಿದ್ದು, ಆನಂದ್​ ಜತೆ ನಿಕಟ ಸಂಪರ್ಕದಲ್ಲಿದ್ದಳು. ಇತ್ತೀಚೆಗೆ ಮಂಡ್ಯ ತೊರೆದಿದ್ದ ಮೌನ ಕುಟುಂಬದ ಜತೆ ಲಾಳಘಟ್ಟ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಈ ಮಧ್ಯೆ ಆನಂದ್​ ಸ್ನೇಹಿತ ರಾಘವೇಂದ್ರ ಜತೆ ಈಕೆಯ ಮನೆಗೆ ಬಂದು ಈ ಮೊದಲಿನಂತೆಯೇ ತನ್ನ ಜತೆ ಇರುವಂತೆ ಪೀಡಿಸುತ್ತಿದ್ದ. ಭಾನುವಾರ ರಾತ್ರಿಯೂ ಲಾಳಘಟ್ಟಕ್ಕೆ ಬಂದು ಗುರು ಜತೆ ಗಲಾಟೆ ನಡೆಸಿದ್ದ. ಸೋಮವಾರ ಮತ್ತೆ ಬಂದು ಪೀಡಿಸಲು ಆರಂಭಿಸಿದಾಗ ಕೋಪಗೊಂಡ ಗುರು ಕುಡುಗೋಲಿನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಆನಂದ್​ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿರುವ ರಾಘವೇಂದ್ರನನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸರಿಗೆ ಶರಣು: ಸೋದರಿಗೆ ಕಿರುಕುಳ ನೀಡುವುದನ್ನು ಸಹಿಸಲಾಗದೆ ಕೃತ್ಯ ಎಸಗಿದ್ದಾಗಿ ಗುರು ಗ್ರಾಮಾಂತರ ಠಾಣೆಗೆ ಹೋಗಿ ಶರಣಾಗಿದ್ದಾನೆ. ವಿಷಯ ತಿಳಿಯುತ್ತಲೇ ಗ್ರಾಮಾಂತರ ಸಿಪಿಐ ಬಿ.ಶಿವಕುಮಾರ್​, ಪಿಎಸ್​ಐ ಲಿಯಾಕತ್​ ಘಟನಾ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net