ಸೊಸೆಯ ಸುತ್ತಿಗೆ ಏಟಿಗೆ ಅತ್ತೆ ಸಾವು! ಚಿತ್ರದುರ್ಗ ಜಿಲ್ಲೇಲಿ ರಾತ್ರೋರಾತ್ರಿ ಅಮಾನುಷ ಕೃತ್ಯ, ಬೆಚ್ಚಿಬಿದ್ದ ಸ್ಥಳೀಯರು

murder case
Published on

ಚಳ್ಳಕೆರೆ: ಮನೆಯಲ್ಲಿ ಮಲಗಿದ್ದ ಅತ್ತೆ ತಲೆಗೆ ಸೊಸೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಅಮಾನುಷವಾಗಿ ಕೊಂದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ಸಂಭವಿಸಿದೆ.

ರುದ್ರಮ್ಮ(60) ಮೃತ ದುರ್ದೈವಿ. ಇವರ ಸೊಸೆ ಮುದ್ದಕ್ಕ ಕೊಲೆ ಆರೋಪಿ. ಅತ್ತೆ-ಸೊಸೆ ನಡುವೆ ಹೊಂದಾಣಿಕೆ ಇರಲಿಲ್ಲ. ಆಗಾಗ್ಗೆ ಇವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು. ಜ.22ರ ರಾತ್ರಿಯೂ ಗಲಾಟೆ ಆಗಿತ್ತು.

ಅಂದು ರಾತ್ರಿ ಮನೆಯಲ್ಲಿ ಮಲಗಿದ್ದ ಅತ್ತೆ ರುದ್ರಮ್ಮಳ ತಲೆಗೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಸೊಸೆ ಮುದ್ದಕ್ಕ ಕೊಲೆ ಮಾಡಿದ್ದಾಳೆ. ಅತ್ತೆಯ ಸಾವಲ್ಲಿ ಜಗಳ ಅಂತ್ಯವಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಪತ್ನಿಯನ್ನು ಕೊಂದ ಸೊಸೆ ವಿರುದ್ಧ ಮೃತಳ ಪತಿ ಕೆಂಚಪ್ಪ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಮುದ್ದಕ್ಕಳನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net