More

    10 ರೂ. ಕೊಡೋ ಯೋಗ್ಯತೆ ಇಲ್ಲ, ಕಾರ್ ತಗೋತೀಯಾ? ಎಂದ ಶೋ ರೂಂ ಸಿಬ್ಬಂದಿಗೆ 1 ತಾಸಲ್ಲೇ ಶಾಕ್​ ಕೊಟ್ಟ ಯುವರೈತ!

    ತುಮಕೂರು: ‘ಹಳ್ಳಿ ಜನ ಅಂತ ತಾತ್ಸಾರ ಮಾಡ್ಬೇಡಿ, ಈ ಗಾಡಿ ಮಾರೋಕ್​ ತಾನೆ ಇಟ್ಟಿರೋದು? ನಮ್​ ಒಡೆಯರು ಕೇಳ್ತಾವ್ರೆ ರೇಟ್​ ಎಷ್ಟು ಅಂತ ಹೇಳಿ…’ ಎಂದು ಚಿಕ್ಕ ಕೇಳಿದ್ದಕ್ಕೆ ಶೋಂ ರೂಂ ಮಾನೇಜರ್ ಮುಖ ಸಿಂಡರಿಸಿಕೊಂಡೇ​, ‘ರೇಟ್​ ಹೇಳಲ್ಲ’ ಅಂದ. ‘ಹೇಳ್ಲಾ ರೇಟ್​ ಎಷ್ಟು?’ ಅಂತ ಒಡೆಯ ಏರು ಧ್ವನಿಯಲ್ಲಿ ಕೇಳಿದ್ರೆ ‘ಇದ್ಹೇನು ದನದ ವ್ಯಾಪಾರ ಅನ್ಕೊಂಡ್ರಾ? ಇದು ಕಾರು, ರೇಟ್​ ಹೇಳೋಕ್​ ಆಗಲ್ಲ’ ಅಂತ ಶೋ ರೂಂ ಮ್ಯಾನೇಜರ್​ ಹೀಯಾಳಿಸಿದ. ‘ಏಯ್​ ರೇಟ್​ ಹೇಳ್ಲಾ…’ ಅಂತ ಒಡೆಯ ಮತ್ತು ಒಡೆಯನ ಗೆಳೆಯ ಚಿಕ್ಕ ಇಬ್ಬರೂ ಕಾರನ್ನು ಎತ್ತೋಕೆ ಹೋಗ್ತಿದ್ದಂತೆ ‘8 ಲಕ್ಷ. ಇದು ಬಾಳೆ ಹಣ್ಣಿನ ವ್ಯಾಪಾರ ಅಲ್ಲ, ಇದು ಕಾರು ವ್ಯಾಪಾರ.. ಕಾರ್​ ತಗೋಳೋ ಮುಖಗಳ್ನೋಡು?’ ಎಂದು ಮತ್ತೆ ಶೋ ರೂಂ ಮ್ಯಾನೇಜರ್​ ಲೇವಡಿ ಮಾಡುತ್ತಿದ್ದಂತೆ ‘ಲೇ ಚಿಕ್ಕಯ್ಯ ನಾವ್ಯಾರು ಅಂತ ಈ ಹೈದಂಗೆ ವಸಿ ಹೇಳ್ಕೋಡ್ಲಾ?’ ಎಂದು ಒಡೆಯ ಹೇಳುತ್ತಿದ್ದಂತೆ ತಾವು ಮೂಟೆಯಲ್ಲಿ ತಂದಿದ್ದ ನೋಟಿನ ಕಂತೆಯ ರಾಶಿಯನ್ನ ಸುರಿದು ‘ಅದ್ರ್ಹಾಗೆ 10 ಲಕ್ಷ ಆಯ್ತೆ, 8 ಲಕ್ಷ ತಗೊಂಡು ಮಿಕ್ಕಿದ್ನ ಚೀಲ್ದಾಗೆ ಕಟ್ಟು. ಕಾರನ್ನ ಕೊಡು..’ ಕೊಡು ಎಂದು ಒಡೆಯ ಹೇಳುವ ಗತ್ತಿನ ಮಾತು ಎಲ್ಲರಿಗೂ ನೆನಪಿದ್ಯಾ?

    ಹೌದು, ಇದು ದಿಗ್ಗಜರು ಸಿನಿಮಾದಲ್ಲಿ ಅಂಬರೀಷ್​ ಮತ್ತು ವಿಷ್ಣುವರ್ಧನ್​ ಕಾರು ಖರೀದಿಸಲೆಂದು ಶೋ ರೂಂಗೆ ಹೋದಾಗ ಇವರ ಉಡುಗೆತೊಡುಗೆ ನೋಡಿ ಅಲ್ಲಿನ ಸಿಬ್ಬಂದಿ ಕೀಳಾಗಿ ಕಾಣುವ ದೃಶ್ಯ. ಇದನ್ನ ಈಗ ಯಾಕೆ ಹೇಳ್ತಿದ್ದೀವಿ ಅಂದ್ರಾ? ಇಂತಹದ್ದೇ ಘಟನೆ ನಿಜವಾಗಿಯೇ ತುಮಕೂರು ಜಿಲ್ಲೆಯಲ್ಲಿ ಸಂಭವಿಸಿದೆ. ಕಾರು ನೋಡಲು ಶೋ ರೂಂಗೆ ಸ್ನೇಹಿತರೊಂದಿಗೆ  ಬಂದಿದ್ದ ಯುವ ರೈತನಿಗೆ ಸಿಬ್ಬಂದಿ ಅವಮಾನಿಸಿದ್ದಾರೆ. ಯುವಕನ ಬಟ್ಟೆ, ವೇಷಭೂಷಣ ನೋಡಿ ಹೀಯಾಳಿಸಿದ ಸಿಬ್ಬಂದಿ, ’10 ರೂಪಾಯಿ ಹಣ ಕೊಡುವ ಯೋಗ್ಯತೆ ಇಲ್ಲ, ನೀನು ಕಾರು ಖರೀದಿ ಮಾಡ್ತೀಯಾ?’ ಅಂತ ವ್ಯಂಗ್ಯವಾಡಿದ್ದಾರೆ. ಇವರ ಮಾತಿಗೆ ಸಿಟ್ಟಾದ ಯುವಕ, ‘ಒಂದೇ ಗಂಟೆಯಲ್ಲಿ ಹಣ ತರಿಸುವೆ. ಕಾರು ಡೆಲಿವರಿ ಕೊಡ್ತೀರಾ?’ ಎಂದು ಚಾಲೆಂಜ್ ಹಾಕಿದ್ದಾನೆ. ಅದರಂತೆ ಒಂದೇ ಗಂಟೆಯಲ್ಲಿ 10 ಲಕ್ಷ ಹಣ ತಂದು ಕಾರು ಡೆಲಿವರಿ ಕೊಡುವಂತೆ ಪಟ್ಟು ಹಿಡಿದ ಘಟನೆ ತುಮಕೂರಿನ ಮಹೇಂದ್ರಾ ಕಾರು ಶೋ ರೂಂನಲ್ಲಿ ನಿನ್ನೆ(ಶುಕ್ರವಾರ) ಸಂಭವಿಸಿದೆ. ಮುಂದೇನಾಯ್ತು ಗೊತ್ತಾ?

    ಕಾರು ಖರೀದಿಸಲೆಂದು ತುಮಕೂರಿನ ಶೋ ರೂಂಗೆ ಬಂದ ವೇಳೆ ಸಿಬ್ಬಂದಿ ಮಾಡಿದ ಅವಮಾನಕ್ಕೆ ಪ್ರತ್ಯುತ್ತರ ಕೊಡಲು ಹೆಬ್ಬೂರು ಹೋಬಳಿಯ ರಾಮನಪಾಳ್ಯದ ಯುವಕ ಕೆಂಪೇಗೌಡ, ಒಂದೇ ಗಂಟೆಯಲ್ಲಿ 10 ಲಕ್ಷ ಹಣ ತರಿಸಿಬಿಟ್ಟ. ಇದನ್ನು ಕಂಡ ಶೋ ರೂಂ ಸಿಬ್ಬಂದಿ ಶಾಕ್​ ಆದರು. ಮೂರ್ನಾಲ್ಕು ದಿನಗಳ ಬಳಿಕ ಕಾರು ಡೆಲಿವರಿ ಕೊಡ್ಹೋದಾಗಿ ಸಿಬ್ಬಂದಿ ಹೇಳುತ್ತಿದ್ದಂತೆ, ಗರಂ ಆದ ಯುವಕ, ಅವಮಾನಿಸುವ ಮುನ್ನ ಇದರ ಬಗ್ಗೆ ಅರಿವು ಇರಬೇಕಿತ್ತು. ನನಗೀಗ ಕಾರು ಬೇಕೇಬೇಕು ಅಂತಾ ಪಟ್ಟು ಹಿಡಿದಿದ್ದ. ಈ ವೇಳೆ ಸಿಬ್ಬಂದಿ ಹಾಗೂ ಯುವಕನ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳಕ್ಕೆ ಬಂದ ತಿಲಕ್ ಪಾರ್ಕ್ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಸಿಬ್ಬಂದಿ ಹಾಗೂ ಯುವಕನ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪ್ರಕರಣ ಇತ್ಯರ್ಥ ಪಡಿಸಿದರು.

    ದೂರು ನೀಡಲು ಬಂದಾಕೆಯನ್ನೇ ಮಂಚಕ್ಕೆ ಕರೆದ ಪೊಲೀಸ್​ ಇನ್​ಸ್ಪೆಕ್ಟರ್​! ಸಂತ್ರಸ್ತೆ ಬಿಚ್ಚಿಟ್ಟ ನೋವು ಇಲ್ಲಿದೆ

    ಪ್ರೇಯಸಿಯನ್ನ ಕೊಂದು ಶವಕ್ಕೆ ಸ್ನಾನ ಮಾಡಿಸಿ ಇಡೀ ರಾತ್ರಿ ಅದರೊಟ್ಟಿಗೆ ಇದ್ದ! ಬೆಳಗಾಗುತ್ತಿದ್ದಂತೆ ನಾಟಕ ಶುರು…

    ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟ ತುಮಕೂರು ಎಸ್​​ಪಿ! ಠಾಣೆ ಮುಂದೆ ಕಾರು ಬರ್ತಿದ್ದಂತೆ ಪಿಎಸ್​ಐ ಗಢಗಢ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts