ಹೆಚ್ಚಾಯ್ತು ಕಿಚ್ಚನ 'ಮ್ಯಾಕ್ಸ್​' ಕಿಚ್ಚು! ಬಾಕ್ಸ್​ ಆಫೀಸ್​ ಗಳಿಕೆ ಹೆಚ್ಚಿಸಲಿದೆಯಾ ಸಾಲು ರಜೆಗಳು? | Max Collection

ವಿಜಯವಾಣಿ (9)
Published on

Max Collection: ಕನ್ನಡ ಚಿತ್ರರಂಗದ ಬಾದ್​ಷಾ, ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಮ್ಯಾಕ್ಸ್’​ ಸಿನಿಮಾ ಇದೇ ಡಿಸೆಂಬರ್​ 25ರಂದು ತೆರೆಕಂಡಿದ್ದು, ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿ, ಬಾಕ್ಸ್ ಆಫೀಸ್​ ದಾಖಲೆ ಮುರಿಯುವತ್ತ ದಾಪುಗಾಲಿಟ್ಟಿದೆ.

‘ವಿಕ್ರಾಂತ್ ರೋಣ’ ಬಿಡುಗಡೆಯಾಗಿ ಎರಡೂವರೆ ವರ್ಷಗಳ ಬಳಿಕ ಸುದೀಪ್ ನಾಯಕರಾಗಿ ಕಾಣಿಸಿಕೊಂಡಿರುವ ‘ಮ್ಯಾಕ್ಸ್’ ಬಿಡುಗಡೆಗೆ ತೀವ್ರ ಕುತೂಹಲ ಹಾಗೂ ಕಾತರ ವ್ಯಕ್ತಪಡಿಸಿದ್ದ ಅಭಿಮಾನಿಗಳಿಗೆ ಇದೀಗ ಕಿಚ್ಚನ ಸಿನಿಮಾ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಮ್ಯಾಕ್ಸಿಮಮ್​ ಮಾಸ್​ ಅಂಶವನ್ನೇ ಚಿತ್ರದಲ್ಲಿ ತೋರಿಸಿರುವ ನಿರ್ದೇಶಕರು, ಸಿನಿಮಾದ ಕೊನೆಯವರೆಗೂ ರೋಚಕತೆ ಮತ್ತು ಕೌತುಕವನ್ನು ಪ್ರೇಕ್ಷಕರಲ್ಲಿ ಮೂಡಿಸಿರುವುದು ಗಮನಾರ್ಹ.

ಸುಮಾರು 50 ಪ್ರತಿಶತದಷ್ಟು

ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವ 'ಮ್ಯಾಕ್ಸ್'​, ಮೊದಲ ದಿನ ಕಂಡ ಟಿಕೆಟ್ ಬುಕ್ಕಿಂಗ್​ಗೆ​ ಹೋಲಿಸಿದರೆ ಎರಡನೇ ದಿನದ ಗಳಿಕೆಯಲ್ಲಿ ಸುಮಾರು 50 ಪ್ರತಿಶತದಷ್ಟು ಕುಸಿತ ಕಂಡಿತು. ಆದಾಗ್ಯೂ, ಮೂರನೇ ದಿನದಂದು ಕಲೆಕ್ಷನ್​ನಲ್ಲಿ ಕ್ರಮೇಣ ಏರಿಕೆಯಾಗಿದ್ದು, ಮೊದಲೆರೆಡು ದಿನಕ್ಕಿಂತ ಮೂರನೇ ದಿನ ಹೆಚ್ಚಿನ ಆದಾಯವನ್ನೇ ತಂದುಕೊಟ್ಟಿದೆ. ಇದು ಚಿತ್ರತಂಡಕ್ಕೆ ಪ್ಲಸ್​ ಆಗಿದೆ.

ವಾರಾಂತ್ಯದ ಮೇಲೆ ಭರವಸೆ

ವರದಿಗಳ ಪ್ರಕಾರ, ಇಂದು ಮ್ಯಾಕ್ಸ್​ ಭಾರತದಲ್ಲಿ 4.15 ಕೋಟಿ ರೂ. ಗಳಿಸಿದ್ದು, ಮೂರನೇ ದಿನದ ಅಂತ್ಯಕ್ಕೆ ಒಟ್ಟು 16.70 ಕೋಟಿ ರೂ. ಕಲೆಕ್ಷನ್ ಕಂಡಿದೆ. ಮೊದಲನೇ ದಿನ ರಾಜ್ಯದಲ್ಲಿ 8.7 ಕೋಟಿ ಗಳಿಕೆ ಕಂಡ ಚಿತ್ರ ಎರಡನೇ ದಿನ 3.85 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟಾರೆ ಚಿತ್ರವು ಮೂರನೇ ದಿನಕ್ಕೆ 16.70 ಕೋಟಿ ರೂಪಾಯಿ ಗಳಿಸಿರುವುದು ಸದ್ಯ ವಾರಾಂತ್ಯದ ಮೇಲೆ ಭಾರೀ ಭರವಸೆ ಮೂಡಿಸಿದೆ. ಸಾಲು ರಜೆಗಳು ಮ್ಯಾಕ್ಸ್​ ಪ್ರದರ್ಶನಕ್ಕೆ ಬಲ ತುಂಬಿದ್ದು, ಅತೀ ಶೀಘ್ರವೇ 25 ಕೋಟಿ ರೂ. ಗಡಿದಾಟುವ ನಿರೀಕ್ಷೆ ಹೆಚ್ಚಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net