ಕೋವಿಡ್​ಗೆ ಗಂಡ ಬಲಿ, ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಬಂದ ಪತ್ನಿ ಹೃದಯಾಘಾತದಿಂದ ಸಾವು

death
Published on

ವಿಜಯನಗರ: ಕೂಡ್ಲಿಗಿ ತಾಲೂಕಿನ ಅಪ್ಪೇನಹಳ್ಳಿ ಗ್ರಾಮದಲ್ಲಿ ಬೆಳಗ್ಗೆ ಪತಿ ಮೃತಪಟ್ಟರೆ, ಅದೇ ದಿನ ಸಂಜೆ ಪತ್ನಿಯೂ ಕೊನೆಯುಸಿರೆಳೆದಿದ್ದಾರೆ.

ಗುತ್ತಿಗೆದಾರ ಪರಮೇಶ್ವರಪ್ಪ(65) ಮತ್ತು ವಾಮದೇವಮ್ಮ(60) ಮೃತರು. ಪರಮೇಶ್ವರಪ್ಪಗೆ ಕರೊನಾ ಸೋಂಕು ತಗುಲಿತ್ತು. ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಗಂಡನ ಅಂತ್ಯಸಂಸ್ಕಾರ ಮಾಡಿ ಮನೆಗೆ ಬಂದ ಪತ್ನಿಗೆ ಅದೇ ದಿನ ಸಂಜೆ ಹೃದಯಾಘಾತವಾಗಿದ್ದು, ಕೊನೆಯುಸಿರೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net